Mon. Dec 23rd, 2024

ಚಂದಗಾಲು ಗ್ರಾಮದಲ್ಲಿ ಶಾಲೆ ವಾಕ್ಫ್ ಬೋರ್ಡ್ ಗೆ:ಬಿಜೆಪಿ ಪ್ರತಿಭಟನೆ

Share this with Friends

ಶ್ರೀರಂಗಪಟ್ಟಣ: ಶ್ರೀರಂಗಪಟ್ಟಣದ ಚಂದಗಾಲು ಗ್ರಾಮದಲ್ಲಿ ಶಾಲೆಯನ್ನು ವಾಕ್ಫ್ ಬೋರ್ಡ್ ಗೆ ಸೇರಿಸಿರುವುದನ್ನು ಖಂಡಿಸಿ ರಾಜ್ಯ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.

ವಿರೋದ ಪಕ್ಷದ ನಾಯಕ ಆರ್. ಅಶೋಕ್, ಸಂಸದ ಎದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಇಂಡವಾಳು ಸಚ್ಚಿದಾನಂದ, ಮಾಜಿ ಸಚಿವ ನಾರಾಯಣಗೌಡ ಮತ್ತಿತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಿಮಗೆ ತಾಕತ್ತಿದ್ದರೆ ನಮ್ಮನ್ನ ಬಂಧಿಸಿ ಎಂದು ಘೊಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಪ್ರತಿ ಜಾಗದಲ್ಲೂ ಕೂಡ ವಕ್ಫ್ ಬೋರ್ಡ್ ನಾಮಫಲಕವನ್ನ ಹಾಕುತ್ತಿದ್ದಾರೆ, ಒಳಗದ್ದೆಗಳು ದೇವಸ್ಥಾನಗಳೆಲ್ಲ ವಕ್ಫ್ ಬೋರ್ಡ್ ಜಾಗ ಮಾಡಲು ಆರಂಭಿಸಿದ್ದಾರೆ ಆದ್ದರಿಂದ ಹಿಂದುಗಳು ಒಗ್ಗಟ್ಟಾಗಿ ನಮ್ಮ ಜಾಗವನ್ನು ನಾವು ಸಂರಕ್ಷಿಸಿಕೊಳ್ಳಬೇಕು ಎಂದು ಪ್ರತಿಭಟನಾ ನಿರತರು ಕರೆ ನೀಡಿದರು.

ನಮ್ಮ ದೇವಸ್ಥಾನವನ್ನು ಸಂರಕ್ಷಿಸಬೇಕು, ನಮ್ಮ ಸಹೋದರಿಯರನ್ನ ರಕ್ಷಿಸಬೇಕು ಇದು ನಮ್ಮ ಕರ್ತವ್ಯವಾಗಬೇಕು ಎಂದು ಹೇಳಿದರು.

ಈಗ ಸರ್ಕಾರ ಈ ಕಾಯ್ದೆಯನ್ನು ಹಿಂಪಡೆಯುತ್ತೇವೆ ಎಂದು ಹೇಳುತ್ತಿದೆ ಆದರೆ ಯಾವುದೇ ರೀತಿಯಲ್ಲೂ ಕಾಯ್ದೆ ಹಿಂಪಡೆಯುವುದಿಲ್ಲ ಒಂದು ಕೋಮನ್ನು ಒಲೈಸಲು ಸರ್ಕಾರ ಇಂತಹ ಕಾಯಿದೆಯನ್ನು ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


Share this with Friends

Related Post