ನಂಜನಗೂಡು: ದೇಶದ ಸರ್ವತೋಮುಖ ಅಭಿವೃದ್ಧಿಗೆ ಆ ದೇಶದ ಕಾನೂನು ವ್ಯವಸ್ಥೆ ಅತ್ಯವಶ್ಯಕ,ಹಾಗಾಗಿ ಪ್ರತಿಯೊಬ್ಬರೂ ದೇಶದ ಕಾನೂನು ಚಾಚು ತಪ್ಪದೆ ಪಾಲಿಸಬೇಕು ಎಂದು ರಾಜ್ಯಶಾಸ್ತ್ರ ಉಪನ್ಯಾಸಕ ಹೆಚ್ಚ್. ಕೆ ಸ್ವಾಮಿಗೌಡ ತಿಳಿಸಿದರು.
ನಂಜನಗೂಡು ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆಯ ಪ್ರಯುಕ್ತ ವಿಶೇಷ ಉಪನ್ಯಾಸ ನೀಡಿದ ಅವರು,ಕಾನೂನು ಪಾಲಿಸಿದಾಗ ಮಾತ್ರ ಬಲಿಷ್ಠ ದೇಶವನ್ನು ಕಟ್ಟಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಹಿರಿಯ ಉಪನ್ಯಾಸಕರಾದ ಅಶ್ವತ್ ನಾರಾಯಣಗೌಡರು ಮಾತನಾಡಿ,ಯಾವ ದೇಶ ಕಾನೂನಾತ್ಮಕವಾಗಿ ಬಲಿಷ್ಠವಾಗಿರುವುದೊ ಅಂತಹ ದೇಶಗಳು ಎಲ್ಲಾ ಕ್ಷೇತ್ರಗಳಲ್ಲಿಯೂ ಪ್ರಬಲವಾಗಿರುತ್ತದೆ. ಪ್ರತಿಯೊಬ್ಬರಿಗೂ ಕಾನುನಿನ ಅರಿವು ಇರಬೇಕು ಎಂದು ಹೇಳಿದರು
ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಲಿಂಗಣ್ಣ ಸ್ವಾಮಿ, ರಂಗಸ್ವಾಮಿ, ಹೆಚ್ .ಕೆ .ಪ್ರಕಾಶ್ ,ಟಿ ಕೆ ರವಿ, ಅದಿಲ್ ಹುಸೇನ್,ರೂಪ ,ಮಾಲತಿ ,ವತ್ಸಲ ,ಮೀನಾ,ದಿನೇಶ್, ಗೋಪಲ್ ಕೃಷ್ಣ ,ಸುಮಿತ್ರ ,ವಸಂತ ಕುಮಾರಿ ,ನಾಗರಾಜ ರೆಡ್ಡಿ ,ರಾಮಾನುಜ, ಹರೀಶ್, ಬಸವಣ್ಣ, ಮಲ್ಲಿಕಾರ್ಜುನ, ನಾಗರಾಜು, ಬಿಂದು, ಶೃತಿ ಮತ್ತಿತರರು ಉಪಸ್ಥಿತರಿದ್ದರು.