Thu. Apr 3rd, 2025

3 ಕ್ಷೇತ್ರಗಳಲ್ಲೂ ಕಾಂಗ್ರೆಸ್ ಗೆ ಸೋಲು: ಹೇಮಾ ನಂದೀಶ್

Share this with Friends

ಮೈಸೂರು: ರಾಜ್ಯದಲ್ಲಿ ಕಾಂಗ್ರೆಸ್‌ ದುರಾಡಳಿತ ಕೊನೆಗಾಣಿಸಲು ಮೂರೂ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಕೈ ಪಕ್ಷದ ಅಭ್ಯರ್ಥಿಗಳನ್ನು ಜನ ಸೋಲಿಸುವುದು ಖಚಿತ ಎಂದು ನಗರ ಬಿಜೆಪಿ ಉಪಾಧ್ಯಕ್ಷೆ ಹೇಮಾ ನಂದೀಶ್ ಹೇಳಿದ್ದಾರೆ.

ಎರಡು ಕಡೆ ಬಿಜೆಪಿ, ಒಂದು ಕಡೆ ಎನ್‌ ಡಿಎ ಅಭ್ಯರ್ಥಿ ನಿಖಲ್ ಕುಮಾರಸ್ವಾಮಿ ಸರ್ಧೆ ಮಾಡಿದ್ದಾರೆ. ಮೂರು ಕ್ಷೇತ್ರದ ಮತದದಾರು ಪ್ರಜ್ಞಾವಂತಿಕೆಯಿಂದ ಮತ ಹಾಕುವ ವಿಶ್ವಾಸ ಇದೆ. ಒಂದೂವರೆ ವರ್ಷ ಕಾಂಗ್ರೆಸ್ ದುರಾಡಳಿತ ನೋಡಿರುವ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಅವರು ಹಿಂದೆ ಲೋಕಾಯುಕ್ತ ಸಂಸ್ಥೆಯನ್ನೇ ಮುಚ್ಚಿಹಾಕಿದ್ದರು. ಇಂದು ಅದೇ ಲೋಕಾಯುಕ್ತ ಮುಂದೆ ತನಿಖೆ ಎದುರಿಸಬೇಕಾಯಿತು ಇದು ವಿಪರ್ಯಾಸವಲ್ಲವೆ ಎಂದಿದ್ದಾರೆ.


Share this with Friends

Related Post