Sat. Apr 19th, 2025

ಪಡಿತರ ಚೀಟಿ ನೋಂದಣಿ ಸರಳಗೊಳಿಸಿ- ವಿಕ್ರಮ ಅಯ್ಯಂಗಾರ್ ಆಗ್ರಹ

Share this with Friends

ಮೈಸೂರು,ಫೆ.21: ಸರ್ಕಾರ ಹೊಸ ಪಡಿತರ ಚೀಟಿ ನೋಂದಣಿ ಪ್ರಕ್ರಿಯೆ ಸರಳೀಕರಣ ಗೊಳಿಸಬೇಕು ಎಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಒತ್ತಾಯಿಸಿದ್ದಾರೆ.

ಹೊಸ ಪಡಿತರ ಕಾರ್ಡ್‌ ನೋಂದಣಿದಾರರಿಗೆ ಸಮಸ್ಯೆಯಾಗುತ್ತಿದ್ದು, ತಿಂಗಳಿಗೆ 3 ದಿನಗಳು ಮಾತ್ರ ನೋಂದಣಿಗೆ ಸಮಯ ನೀಡಲಾಗುತ್ತಿದೆ.

ಈ ಮೂರು ದಿನದಲ್ಲಿ ಕೇವಲ 1 ದಿನ ಮಾತ್ರ ಸರ್ವರ್ ಕೆಲಸ ಮಾಡುತ್ತಿದೆ. ಇದರಿಂದ ಫಲಾನುಭವಿಗಳಿಗೆ ಸಮಸ್ಯೆಯಾಗುತ್ತಿದೆ ಕೂಡಲೇ ಸರ್ಕಾರ ಹೊಸ ಅರ್ಜಿಗೆ ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಬಡ ಕೂಲಿ ಕಾರ್ಮಿಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಹಾಗೂ ಚಿಕಿತ್ಸೆ ಪಡೆಯುವ ಬಡವರಿಗೆ ತೊಂದರೆ ಆಗುತ್ತಿದೆ. ಯಾವುದೇ ಸೌಲಭ್ಯ ಪಡೆಯಬೇಕಾದರೆ ಪಡಿತರ ಚೀಟಿ ಅಗತ್ಯವಿದೆ.

ಆದರೆ ಪಡಿತರ ಚೀಟಿ ನೋಂದಣಿ ಪ್ರಕ್ರಿಯೆಯಲ್ಲಿ ಗೊಂದಲಮಯವಾಗಿದೆ.ಆದ್ದರಿಂದ ಎಲ್ಲಾ ತೊಂದರೆಗಳನ್ನು ಸರಿಪಡಿಸಿ ರಾಜ್ಯ ಸರ್ಕಾರ ಹೊಸ ಪಡಿತರ ಚೀಟಿ ನೋಂದಣಿ ಪ್ರಕ್ರಿಯೆ ಸರಳೀಕರಣಗೊಳಿಸಬೇಕು ಎಂದು ‌ವಿಕ್ರಂ ಅಯ್ಯಂಗಾರ್ ಆಗ್ರಹಿಸಿದ್ದಾರೆ.


Share this with Friends

Related Post