Mon. Dec 23rd, 2024

ಇಬ್ಬರು ಗಾಂಜಾ ಮಾರಾಟಗಾರರ ಬಂಧನ:154 ಕೆಜಿ ಗಾಂಜಾ ವಶ

Share this with Friends

ಮೈಸೂರು: ಇಬ್ಬರು ಗಾಂಜಾ ಮಾರಾಟಗಾರರನ್ನು ಬಂಧಿಸಿರುವ
ಉದಯಗಿರಿ ಠಾಣೆ ಪೊಲೀಸರು 38.60 ಲಕ್ಷ ಮೌಲ್ಯದ 154 ಕೆಜಿ 450 ಗ್ರಾಂ ಗಾಂಜಾ ವಶಪಡಿಸಿಕೊಂಡಿದ್ದಾರೆ.

ಸೈಯದ್ ವಾಸೀಂ ಹಾಗೂ ಯಾಸ್ಮಿನ್ ತಾಜ್ ಬಂಧಿತ ಆರೋಪಿಗಳು.

ಆರೋಪಿಗಳಿಂದ ಎರಡು ಮೊಬೈಲ್ ಸೀಜ್ ಮಾಡಲಾಗಿದೆ.ಮತ್ತೊಬ್ಬ ಪ್ರಮುಖ ಆರೋಪಿ ಅಫ್ರೋಜ್ ಖಾನ್ ತಲೆ
ತಲೆ ಮರೆಸಿಕೊಂಡಿದ್ದು ಅವನ ಬಂಧನಕ್ಕೆ ಬಲೆ ಬೀಸಲಾಗಿದೆ.

ಕಲ್ಯಾಣಗಿರಿಯ ಕೆ ಹೆಚ್ ಬಿ ಕಾಲೋನಿಯ ಮನೆಯೊಂದರಲ್ಲಿ ಅಕ್ರಮವಾಗಿ ಗಾಂಜಾ ಸಂಗ್ರಹಿಸಿಟ್ಟಿದ್ದರ ಬಗ್ಗೆ ಖಚಿತ ಮಾಹಿತಿ ಆಧರಿಸಿ ಉದಯಗಿರಿ ಠಾಣೆ ಪೊಲೀಸರು ದಾಳಿ ನಡೆಸಿದರು.

ಈ‌ ವೇಳೆ ಮನೆಯಲ್ಲಿ 154 ಕೆಜಿ 450 ಗ್ರಾಂ ತೂಕದ ಗಾಂಜಾ ಪತ್ತೆ ಆಗಿದೆ.
ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post