Sat. Nov 16th, 2024

ಮನೆಗಳ್ಳನ ಬಂಧನ36.12 ಲಕ್ಷ ಮೌಲ್ಯದ ವಸ್ತುಗಳು ವಶ

Share this with Friends

ಮೈಸೂರು: ಮನೆಗಳ್ಳನನ್ನು ಬಂಧಿಸಿರುವ ಕುವೆಂಪುನಗರ ಠಾಣೆ ಪೊಲೀಸರು 36.12 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು ವಾಸಿ ಪ್ರಸಾದ್ ಆಲಿಯಾಸ್ ಆಸಿಫ್ ಬಂಧಿತ ಆರೋಪಿ.ಮತ್ತೊಬ್ಬ ಆರೋಪಿ ಮಹಮದ್ ಮುನ್ನಾ ತಲೆ ಮರೆಸಿಕೊಂಡಿದ್ದಾನೆ.

ಆರೋಪಿಯಿಂದ 516 ಗ್ರಾಂ ಚಿನ್ನಾಭರಣ, 10 ಸಾವಿರ ಮೌಲ್ಯದ 28.70 ಗ್ರಾಂ ಬೆಳ್ಳಿ ಪದಾರ್ಥ ಸೇರಿ ಒಟ್ಟು 36.22 ಲಕ್ಷ ಮೌಲ್ಯದ ಪದಾರ್ಥಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.

ಶ್ರೀರಂಗಪಟ್ಟಣ ತಾಲೂಕು ನಗುವಿನಹಳ್ಳಿಯ ಮನೆಯೊಂದರಲ್ಲಿ ಆರೋಪಿಗಳು ಕಳ್ಳತನ ಮಾಡಿದ್ದರು.

ಕುವೆಂಪುನಗರ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಶ್ರೀರಾಂಪುರ ಚೆಕ್ ಪೋಸ್ಟ್ ಬಳಿ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದ ಪ್ರಸಾದ್ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದ.

ತಕ್ಷಣ ಪ್ರಸಾದ್ ನನ್ನು ವಶಕ್ಕೆ ಪಡೆದು ಸ್ಕೂಟರ್ ಪರಿಶೀಲಿಸಿದಾಗ ಕಳುವಾದ ಪದಾರ್ಥಗಳು ಪತ್ತೆಯಾಗಿದೆ.

ಬಂಧಿತ ಆರೋಪಿ ಪ್ರಸಾದ್ ವಿರುದ್ದ ವಿವಿದೆಡೆಗಳಲ್ಲಿ ನಡೆದ 33 ಮನೆಗಳವು ಪ್ರಕರಣಗಳು ದಾಖಲಾಗಿದೆ.

ಮತ್ತಷ್ಟು ಕಳುವಾದ ಪದಾರ್ಥಗಳು ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿ ಮುನ್ನ ಬಳಿ ಇದ್ದು ಆತನ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದೆ.

ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ.ಎಸ್.ಅವರ ಮಾರ್ಗದರ್ಶನದಲ್ಲಿ, ಕೆ.ಆರ್.ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಕುವೆಂಪುನಗರ ಠಾಣೆ ಪಿಐ ಅರುಣ್ ಎಲ್,ಹಾಗೂ ಪಿಎಸ್ಸೈ ಗಳಾದ ಗೋಪಾಲ್,ಮದನ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್,ಮಹೇಶ್ವರ್,ಮಂಜುನಾಥ್ ಕೆ.ಟಿ,ಮಂಜುನಾಥ್ ಎಂ.ಪಿ,ಯಶವಂತ್,
ಮಂಜು,ಹಜರತ್,ಸುರೇಶ್,ರವಿ,ನಾಗೇಶ್ ಹಾಗೂ ಕುಮಾರ್ ಕಾರ್ಯಾಚರಣೆಯಲ್ಲಿ
ಪಾಲ್ಗೊಂಡಿದ್ದರು.


Share this with Friends

Related Post