Mon. Dec 23rd, 2024

ಸಲಿಂಗ ಸಂಬಂಧ ಮುಚ್ಚಿಡಲು ತನ್ನದೇ ಕಂದನ ಕೊಂದ ಪಾಪಿ ತಾಯಿ

Share this with Friends

ಕೋಲ್ಕತ್ತಾ,ಫೆ.21: ತನ್ನ ಸಲಿಂಗ ಸಂಬಂದ ಮುಚ್ಚಿಡಲು ಪಾಪಿ ಮಹಿಳೆ‌ ತನ್ನದೇ ಕಂದನನ್ನು ಅತಿ ಭೀಕರವಾಗಿ ಕೊಂದಿರುವ ನೀಚ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಸಲಿಂಗ ಕಾಮದಲ್ಲಿ ತೊಡಗಿದ್ದ ವೇಳೆ ಪುತ್ರನ ಕಣ್ಣಿಗೆ ಬಿದ್ದ ಮಹಿಳೆ ತನ್ನ ಈ ಕೆಟ್ಟ‌ ಸಂಬಂಧ ಮುಚ್ಚಿಡಲು ಮಗನನ್ನು ಭೀಕರವಾಗಿ ಹತ್ಯೆ ಮಾಡಿರುವ ಹೇಯ ಘಟನೆ ಪಶ್ಚಿಮ ಬಂಗಾಳದ ಹೂಗ್ಲಿ ಕೊನ್ನಾಗರ್ ಪ್ರದೇಶದಲ್ಲಿ ನಡೆದಿದೆ.

ಕೊನ್ನಾಗರ್ ಪ್ರದೇಶದ ನಿವಾಸಿ ಶಾಂತ ಶರ್ಮಾಗೆ ಮದುವೆಗೂ ಮೊದಲೇ ಇಶ್ರತ್ ಫರ್ವೀನ್ ಎಂಬಾಕೆಯೊಂದಿಗೆ ಸಲಿಂಗ ಲೈಂಗಿಕ ಸಂಬಂಧ ಇತ್ತಂತೆ, ಮದುವೆಯ ನಂತರವೂ ಇವರ ಸಂಬಂಧ ಮುಂದುವರೆದಿದೆ.

ಈ‌ ವಿಷಯ ಆಕೆಯ ಪತಿಗೂ ಗೊತ್ತಿದ್ದರೂ ಆತ‌ ಸುಮ್ಮನಿದ್ದ.ಇವರ ಸಂಬಂಧಕ್ಕೆ ರಹದಾರಿ ಸಿಕ್ಕಂತಾಗಿ ಅದು ಮುಂದುವರಿದಿತ್ತು.

ತಾಯಿ ಹಾಗೂ ಆಕೆಯ ಗೆಳತಿ ಸಲಿಂಗ ಕಾಮದಲ್ಲಿ ತೊಡಗಿದ್ದನ್ನು ಪುತ್ರ ಶ್ರೇಯಾಂಶು ಶರ್ಮಾ ಒಮ್ಮೆ ನೋಡಿಬಿಟ್ಟ,ಅಂದಿನಿಂದ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದ.

ಮಗನ ಸ್ಥಿತಿ ಕಂಡು ಶಾಂತ ಶರ್ಮಾ‌ ದಿಗಿಲುಗೊಂಡಿದ್ದಾಳೆ,ಸಮಾಜದಲ್ಲಿ ಸಂಭಾವಿತಳಂತೆ ಇದ್ದ ಶಾಂತ ಶರ್ಮ ಬೇರೆಯವರಿಗೆ ಹೇಳಿ ಬಿಟ್ಟರೆ, ಮಾನ ಮರ್ಯಾದೆ ಹಾಳಾಗುತ್ತದೆ ಎಂದು ಎಣಿಸಿ ತಾನು ಹೆತ್ತ ಮಗನನ್ನೇ ಮುಗಿಸಲು ಪ್ಲ್ಯಾನ್ ಮಾಡಿದ್ದಾಳೆ.

ತನ್ನ ಸಂಗಾತಿ ಇಶ್ರತ್ ಫರ್ವೀನ್ ಜೊತೆಗೂಡಿ, ಮಗನ ತಲೆಗೆ ಹಲವು ಬಾರಿ ಹೊಡೆದು ಹತ್ಯೆ ಮಾಡಿ, ತಲೆಯನ್ನು ಜಜ್ಜಿ ಹಾಕಿ ಬೇರ್ಪಡಿಸಿ, ಕೈಗಳನ್ನು ಕತ್ತರಿಸಿ ಭೀಕರವಾಗಿ ಕೊಂದಿದ್ದಾರೆ.

ಈ ಕೊಲೆ ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿಧಿ ವಿಜ್ಞಾನ ತಜ್ಞರ ಸಹಾಯದೊಂದಿಗೆ ಸಲಿಂಗ ಕಾಮಿಗಳಾದ ಶಾಂತ ಶರ್ಮಾ, ಇಶ್ರತ್ ಫರ್ವೀನ್ ಇವರನ್ನು ಬಂಧಿಸಿರುವುದಾಗಿ ಡೆಪ್ಯುಟಿ ಕಮೀಷನರ್ ಅರ್ನಾಬ್ ಬಿಸ್ವಾಸ್ ತಿಳಿಸಿದ್ದಾರೆ.

ಚಂದೆರ್ ನಗರ ಪೊಲೀಸ್ ಕಮಿಷನರ್ ಅಮಿತ್ ಕುಮಾರ್ ಜವಲಗಿ ಅವರು ಈ ಬಾಲಕನ ಕೊಲೆ ಅತ್ಯಂತ‌ ಭೀಕರ ಸೈಕೊಪಾತ್ ಗಳಂತೆ ಶಾಂತಾ ಶರ್ಮ ಹಾಗೂ ಅಕೆಯ ಗೆಳತಿ ಇಶ್ರತ್ ಪರ್ವಿನ್ ನಡೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.


Share this with Friends

Related Post