Mon. Dec 23rd, 2024

ಜಿ.ಎಸ್.ಎಮ್ ಮೂರನೇ ವರ್ಷದ ವಾರ್ಷಿಕ ಪರೀಕ್ಷಾ ಅರ್ಜಿ ಸಲ್ಲಿಕೆ ದಿನಾಂಕ ವಿಸ್ತರಣೆ

Share this with Friends

ಬೆಂಗಳೂರು: ಇದೇ ಡಿಸೆಂಬರ್ ನಲ್ಲಿ ನಡೆಯುವ ಜಿ.ಎಸ್.ಎಮ್ ಮೂರನೇ ವರ್ಷದ ವಾರ್ಷಿಕ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸಲು ನಿಗಧಿಪಡಿಸಿರುವ ದಿನಾಂಕವನ್ನು ವಿಸ್ತರಿಸಲಾಗಿದೆ.

ಡಿಸೆಂಬರ್ ನಲ್ಲಿ ನಡೆಯುವ ಜಿ.ಎನ್.ಎಮ್. ಮೂರನೇ ವರ್ಷದ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಯನ್ನು ಪರೀಕ್ಷಾ ಮಂಡಳಿ ನವೆಂಬರ್ 13 ಪ್ರಕಟಿಸಲಾಗಿದೆ.

ವಾರ್ಷಿಕ ಪರೀಕ್ಷೆಯ ಮೂರನೇ ವರ್ಷದ ಪರೀಕ್ಷಾ ಅರ್ಜಿಗಳನ್ನು ಸಲ್ಲಿಸುವ ಕೊನೆಯ ದಿನಾಂಕವನ್ನು ನ.24ಕ್ಕೆ ನಿಗಧಿಗೊಳಿಸಲಾಗಿತ್ತು.

ಆದರೆ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೂರನೇ ವರ್ಷದ ವಾರ್ಷಿಕ ಪರೀಕ್ಷೆಯ ಪರೀಕ್ಷಾ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಲು ಕೊನೆಯ ದಿನಾಂಕವನ್ನು ನ.27 ರವರೆಗೆ ವಿಸ್ತರಿಸಲಾಗಿದೆ‌ ಎಂದು
ಕರ್ನಾಟಕ ಶುಶೂಷಾ ಮತ್ತು ಆರೆ ವೈದ್ಯಕೀಯ ವಿಜ್ಞಾನಗಳ ಶಿಕ್ಷಣ (ನಿಯಂತ್ರಣ) ಪ್ರಾಧಿಕಾರ ಪ್ರಕಟಣೆಯಲ್ಲಿ ತಿಳಿಸಿದೆ.


Share this with Friends

Related Post