ಮೈಸೂರು: ವಿಶ್ವ ಒಕ್ಕಲಿಗರ ಮಹಾ ಸಂಸ್ಥಾನ ಮಠದ ಶ್ರೀ ಚಂದ್ರಶೇಖರ ನಾಥ ಸ್ವಾಮೀಜಿ ಯವರ ಮೇಲೆ ಎಫ್ಐಆರ್ ದಾಖಲಿಸಿರುವುದನ್ನು ಖಂಡಿಸಿ ಮೈಸೂರಿನಲ್ಲಿ ಒಕ್ಕಲಿಗ ಸಂಘಟನೆಗಳು ಪ್ರತಿಭಟನೆ ನಡೆಸಿದವು.
ಜಿಲ್ಲಾ ಪಂಚಾಯತ್ ಕಛೇರಿ ಮುಂಭಾಗ ರಾಜ್ಯ ಒಕ್ಕಲಿಗರ ಸಂಘ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘ ಮತ್ತು ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ಸದಸ್ಯರು ಹಾಗೂ ಒಕ್ಕಲಿಗ ಮುಖಂಡರು ಪ್ರತಿಭಟನೆ ನಡೆಸಿ ಕೂಡಲೇ ರಾಜ್ಯ ಸರ್ಕಾರ ಸ್ವಾಮೀಜಿಯವರ ಮೇಲಿನ ಕೇಸನ್ನು ವಾಪಸು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಒಬ್ಬ ಮುಸ್ಲಿಂ ಮಹಿಳೆ, ನಮಗೆ ಕುರಾನ್ ಮೊದಲ ಸಂವಿಧಾನ. ಮುಸ್ಲಿಂ ಕಾನೂನನ್ನು ಪ್ರಶ್ನಿಸುವ ಯಾವುದನ್ನು ನಾವು ಸ್ವೀಕರಿಸಲ್ಲ, ಎಂದು ಸುಪ್ರೀಂಕೋರ್ಟ್ ತೀರ್ಪಿನ ಬಗ್ಗೆ ಹೇಳಿದ್ದಕ್ಕೆ, ಶ್ರೀ ಚಂದ್ರಶೇಖರ್ ಸ್ವಾಮೀಜಿ ರವರು ಇವರಿಗೆ ಸಂವಿಧಾನ ಬೇಡ ಎಂದ ಮೇಲೆ, ಮತದಾನದ ಹಕ್ಕು ಏತಕ್ಕೆ ಎಂದು ಹೇಳಿದ್ದಾರೆ.
ಹಿಂದೆ ನಮಗೆ ಸ್ವಾತಂತ್ರ್ಯ ಸಿಕ್ಕಿ ಪಾಕಿಸ್ತಾನ ಬೇರೆಯಾದ ಮೇಲೆ, ಸಂವಿಧಾನದ ಶಿಲ್ಪಿ ಡಾಕ್ಟರ್ ಬಿ.ಆರ್. ಅಂಬೇಡ್ಕರ್ ಅವರು ಭಾರತದಲ್ಲಿರುವ ಮುಸ್ಲಿಮರಿಗೆ ಪಾಕಿಸ್ತಾನ ಪ್ರತ್ಯೇಕ ದೇಶವಾದ ಮೇಲೆ ಮತದಾನದ ಹಕ್ಕು ಬೇಡ ಎಂದಿದ್ದನ್ನು ಇಲ್ಲಿ ನಾವು ಸ್ಮರಿಸಬಹುದು ಎಂದು ಒಕ್ಕಲಿಗ ಸಂಘದವರು ತಿಳಿಸಿದರು.
ಜೊತೆಗೆ ಸ್ವಾಮೀಜಿ ಅವರು ಮಾತನಾಡುವಾಗ ಮುಸ್ಲಿಂ ರಾಷ್ಟ್ರ ಪಾಕಿಸ್ತಾನದ ವಿಸ್ತೀರ್ಣಕ್ಕಿಂತ ನಮ್ಮ ದೇಶದಲ್ಲಿರುವ ವರ್ಕ್ಫ್ ಆಸ್ತಿ ವಿಸ್ತಿರ್ಣವೇ ಹೆಚ್ಚಿದೆ. ಆದ್ದರಿಂದ ಒಂದು ಭಾರತದಲ್ಲಿರುವ ಮುಸ್ಲಿಮರಿಗೆ ಮತದಾನದ ಹಕ್ಕು ಬೇಡ ಅಥವಾ ವಕ್ಫ್ ಬೋರ್ಡ್ ರದ್ದು ಮಾಡಿ ಎಂದು ಹೇಳಲು ಹೋಗಿರುವುದು ಅಷ್ಟೇ ವಿನಹಾ ಬೇರೇನೂ ಉದ್ದೇಶದಿಂದ ಹೇಳಿಲ್ಲ,ಅದರಲ್ಲಿ ತಪ್ಪು ಹುಡುಕುವ ಅಗತ್ಯವಿಲ್ಲ ಎಂದು ಪ್ರತಿಭಟನಾ ನಿರತರು ಹೇಳಿದರು.
ರಾಜ್ಯ ಸರ್ಕಾರ ತಕ್ಷಣ ಸ್ವಾಮೀಜಿಯವರ ಮೇಲೆ ದಾಖಲಿಸಿರುವ ಎಫ್ಐಆರ್ ವಾಪಾಸು ಪಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಒಕ್ಕಲಿಗ ಸಂಘಟನೆಗಳು ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್, ಶಿವೇಗೌಡ, ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಲತ ರಂಗನಾಥ್, ಶಿವಲಿಂಗಯ್ಯ, ಮೈಸೂರು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಮರಿಸ್ವಾಮಿ, ಚೇತನ್, ಮಂಜುನಾಥ್, ರಘುರಾಂ, ಚರಣ್ ರಾಜ್, ನಾಗಣ್ಣ, ವರಕೂಡು ಕೃಷ್ಣೇಗೌಡ, ರಾಮಕೃಷ್ಣ, ಆಟೋ ಮಹದೇವು, ನಾಗರಾಜು, ಆನಂದ್ , ಲಕ್ಷ್ಮೀ ಮತ್ತಿತರರು ಪಾಲ್ಗೊಂಡಿದ್ದರು.