Mon. Dec 23rd, 2024

ಸಿಲಿಕಾನ್ ಸಿಟಿಯಲ್ಲಿ ವೃದ್ಧ ದಂಪತಿ ಆತ್ಮಹತ್ಯೆ

Share this with Friends

ಬೆಂಗಳೂರು,ಫೆ.22: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವೃದ್ಧ ದಂಪತಿ ಆತ್ಮಹತ್ಯೆ
ಮಾಡಿಕೊಂಡಿರುವ ಘಟನೆ ನಡೆದಿದೆ.

ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣಾ ವ್ಯಾಪ್ತಿಯ ಇಟ್ಟಮಡು ಮುಖ್ಯರಸ್ತೆ, ಕೃಷ್ಣಯ್ಯ ಲೇಔಟಿನ ನಿವಾಸಿ ಕೃಷ್ಣ ನಾಯ್ಡು (84) ಹಾಗೂ ಸರೋಜಮ್ಮ (74) ಆತ್ಮಹತ್ಯೆ ಮಾಡಿಕೊಂಡ ‌ದುರ್ದೈವಿಗಳು.

ಬಹಳ ವರ್ಷಗಳ ಹಿಂದೆ ಈ ದಂಪತಿ ಆಂದ್ರದಿಂದ ಬಂದು ಕೃಷ್ಣಯ್ಯ ಲೇಔಟಿನಲ್ಲಿ ದೊಡ್ಡ ಮನೆ ಕಟ್ಟಿಕೊಂಡು ವಾಸವಿದ್ದರು. ದಂಪತಿಗೆ ಅಶೋಕ ಎಂಬ ಮಗನಿದ್ದು ಆತನಿಗೆ ವಿವಾಹ ಮಾಡಿದ್ದರು.

ಆದರೆ‌ ಅಶೋಕ ಪತ್ನಿಯೊಂದಿಗೆ ಬೇರೆ ವಾಸವಾಗಿದ್ದಾರೆ.ಈತ ತಂದೆ,ತಾಯಿಯೊಂದಿಗೆ ಒಂದು‌ ವಾರದ ಹಿಂದೆ ಜಗಳವಾಡಿದ್ದ ಎಂಬುದು ಗೊತ್ತಾಗಿದೆ.

ಮನೆಯ ಮೊದಲ ಮಹಡಿಯಲ್ಲಿರುವ ರೂಮಿನ ಕಿಟಕಿಯ ಗ್ರಿಲ್‌ ಗೆ ನೇಣು ಬಿಗಿದುಕೊಂಡು ವೃದ್ಧ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಬೆಳಿಗ್ಗೆ ಬಹಳ‌ ಹೊತ್ತಾದರೂ ಬಾಗಿಲು ತೆಗೆಯದೆ ಇದ್ದಾಗ ಸಂಬಂಧಿಕರು ಪೊಲೀಸರಿಗೆ ತಿಳಿಸಿದ್ದಾರೆ.

ಚನ್ನಮ್ಮನಕೆರೆ ಅಚ್ಚುಕಟ್ಟು ಠಾಣೆ ಪೊಲೀಸರು ಬಂದು ಪರಿಶೀಲಿಸಿದಾಗ ದಂಪತಿ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.

ಸಧ್ಯಕ್ಕೆ ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಕೌಟುಂಬಿಕ ಕಾರಣದಿಂದ ಆತ್ಮಹತ್ಯೆಗೆ ಶರಣಾಗಿರಬಹುದು ವಿಧಿವಿಜ್ಞನ ವರದಿ ಬರಬೇಕಿದೆ,ನಾವು ತನಿಖೆ ನಡೆಸಿದ ನಂತರ ನಿಖರ ಕಾರಣ ಗೊತ್ತಾಗಲಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.


Share this with Friends

Related Post