Tue. Jan 7th, 2025

ಕೆಸರೆ ಗ್ರಾಮಕ್ಕೂ ಸಿದ್ದರಾಮಯ್ಯ ಹೆಸರಿಡಿ:ಕುಮಾರಸ್ವಾಮಿ ವ್ಯಂಗ್ಯ

Share this with Friends

ಮೈಸೂರು: ದೇವನೂರು ಬಡಾವಣೆಗೆ ಅಷ್ಟೇ ಏಕೆ ಕೆಸರೆ ಗ್ರಾಮಕ್ಕೂ ಸಿದ್ದರಾಮಯ್ಯ ಹೆಸರಿಡಿ, ರಾಜ್ಯಕ್ಕೂ ಇಡಿ ಎಂದು
ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯ ವಾಡಿದರು.

ಮೈಸೂರಿನಲ್ಲಿ ‌ಸುದ್ದಿಗಾರರೊಂದಿಗೆ
ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರ ಕುರಿತು ಪ್ರತಿಕ್ರಿಯಿಸಿ, ಇಡೀ ರಾಜ್ಯಕ್ಕೆ ಸಿದ್ದರಾಮಯ್ಯ ಹೆಸರಿಟ್ಟುಬಿಡಿ ಟೀಕಿಸಿದರು.

ಕೆ ಎಸ್ ಆರ್‌ಟಿಸಿ‌ ಬಸ್ ಪ್ರಯಾಣ ದರ ಹೆಚ್ಚಳ ವಿಚಾರ ಕುರಿತು ಪ್ರತಿಕ್ರಿಯಿಸಿದ ಹೆಚ್.ಡಿ ಕೆ, ದರ ಹೆಚ್ಚಳ ಜನಕ್ಕೆ ತಾನೇ. ಮಂತ್ರಿಗಳಿಗೆ ಅಲ್ವಾಲ್ಲ,ಅವರಿಗೇನು ಜನರ ಜೇಬಿಗೆ ಕೈ ಹಾಕಿ ಲೂಟಿ ಮಾಡುತ್ತಿದ್ದಾರೆ. ಜನರಿಗೆ ಕಷ್ಟ ಕೊಟ್ಟು ಖುಷಿ ಪಡುವ ಸರ್ಕಾರ ಇದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಗ್ಯಾರಂಟಿಗಳಿಗೆ ಇಬ್ಬರು ಮಹನೀಯರು ಸಹಿ ಹಾಕಿದರು. ಸಿದ್ದರಾಮಯ್ಯ ಸಹಿ ಹಾಕಿದರು ಇನ್ನೊಬ್ಬ ಮಹಾನ್ ವ್ಯಕ್ತಿ ಬಗ್ಗೆ ನಾನು ಹೇಳಲ್ಲ, ದೇಶದಲ್ಲಿ ಮನಮೋಹನ್ ಸಿಂಗ್ ಬಳಿಕ ಸಿದ್ದರಾಮಯ್ಯ ದೊಡ್ಡ ಆರ್ಥಿಕ ತಜ್ಞರು, ಅವರೇ ಅಲ್ಲವೇ ಸಹಿ ಹಾಕಿರೋದು ಎಂದು ಟಾಂಗ್ ನೀಡಿದರು.

ಅಪರೇಷನ್ ಹಸ್ತದ ವಿಚಾರ ಕುರಿತು ಪ್ರತಿಕ್ರಿಯಿಸಿದ ಕುಮಾರಸ್ವಾಮಿ, ಅದು ನಡೀತಾನೆ ಇದೆ. ನಮ್ಮಲ್ಲಿ 18 ಜನ ಶಾಸಕರಿದ್ದಾರೆ. ಒಟ್ಟಾಗಿದ್ದಾರೆ ಅದನ್ನೇ ಹರೀಶ್ ಗೌಡ ಹೇಳಿರೋದು. ಒತ್ತಡ ಅಂತೂ ಇರತ್ತೆ ಅದನ್ನೇ ಬೆಳಗಾವಿಯಲ್ಲಿ ಶಾಸಕರು ಕೂತು ಮಾತನಾಡಿದ್ದಾರೆ ಅಷ್ಟೇ. ನಮ್ಮ ಶಾಸಕರು ನಮ್ಮ ಜೊತೆ ಇರುತ್ತಾರೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಜಿ.ಟಿ.ದೇವೇಗೌಡರ ಮುನಿಸು ಅದು ಇರುತ್ತೆ,ಜೆಡಿಎಸ್ ಮತ್ತು ಜಿಟಿಡಿದು ಗಂಡ- ಹೆಂಡತಿ ಜಗಳದ ತರ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಉತ್ತರಿಸಿದರು.


Share this with Friends

Related Post