Thu. Jan 9th, 2025

ಮೈಸೂರಿನಲ್ಲಿ ಎಸೆನ್ಸ್ ಸೇವಿಸಿ ಮೂವರು ಖೈದಿಗಳು ಸಾವು

Share this with Friends

ಮೈಸೂರು: ಬೇಕರಿ ಎಸೆನ್ಸ್ ಸೇವಿಸಿ ಆಸ್ಪತ್ರೆ ಸೇರಿದ್ದ ಮೈಸೂರು ಜೈಲಿನ ಮೂವರು ಖೈದಿಗಳು ಮೃತಪಟ್ಟಿದ್ದಾರೆ.

ಮೈಸೂರಿನ ಕೇಂದ್ರ ಕಾರಾಗೃಹದಲ್ಲಿರುವ ಬೇಕರಿಯಲ್ಲಿ ಕೇಕ್ ತಯಾರಿಸಲು ತರಿಸಿದ್ದ ಎಸೆನ್ಸ್ ಅನ್ನು ಖೈದಿಗಳು ಸೇವಿಸಿದ್ದರು.

ತಕ್ಷಣ ಕಾರಾಗೃಹ ಅಧಿಕಾರಿಗಳು ಮೂವರು ಖೈದಿಗಳನ್ನು ಕೆ ಆರ್ ಆಸ್ಪತ್ರೆಗೆ ದಾಖಲಿಸಿದ್ದರು.ಅದರಲ್ಲಿ ಮಂಗಳವಾರ ಒಬ್ಬ ಖೈದಿ ಸಾವನ್ನಪ್ಪಿದ್ದ.ಬುಧವಾರ ಮತ್ತಿಬ್ಬರು ಖೈದಿಗಳು ಕೂಡಾ ಮೃತಪಟ್ಟಿದ್ದಾರೆ.

ಚಾಮರಾಜನಗರದ ನಾಗರಾಜು,
ಮೈಸೂರಿನ ಸಾತಗಳ್ಳಿಯ ಮಾದೇಶ್,ರಮೇಶ ಮೃತಪಟ್ಟ ಖೈದಿಗಳು.

ಬೇಕರಿ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಈ ಮೂವರು, ಕಿಕ್ ಗಾಗಿ
ಡಿ.28 ರಂದು ಹೊಸವರ್ಷದ ಕೇಕ್ ತಯಾರಿಸಲು ತರಿಸಲಾಗಿದ್ದ ಎಸೆನ್ಸ್ ಕುಡಿದು ಯಾರಿಗೂ ಹೇಳದೆ ಸುಮ್ಮನಾಗಿದ್ದರು.

ಮೂವರಿಗೂ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜೈಲಿನಲ್ಲಿ ಚಿಕಿತ್ಸೆ ನೀಡಲಾಗಿತ್ತು.

ಆದರೆ ಹೊಟ್ಟೆ ನೋವು ಕಡಿಮೆಯಾಗದ ಕಾರಣ ಕೆ ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆಗಲೂ ಈ ಮೂವರು ವಿಷಯ ಮುಚ್ಚಿಟ್ಟಿದ್ದರು. ವೈದ್ಯರು ಈ ಬಗ್ಗೆ ಮತ್ತೆ,ಮತ್ತೆ ಪ್ರಶ್ನಿಸಿದಾಗ ಸತ್ಯ ಹೇಳಿದ್ದಾರೆ.

ಅಷ್ಟರಲ್ಲಾಗಲೇ ಸಾಕಷ್ಟು ವಿಳಂಬವಾಗಿದ್ದರಿಂದ
ಚಿಕಿತ್ಸೆ ಫಲಿಸದೆ ಮಾದೇಶ, ನಾಗರಾಜು ರಮೇಶ್ ಮೃತಪಟ್ಟಿದ್ದಾರೆ.

ಹಿರಿಯ ಅಧಿಕಾರಿಗಳು ಜೈಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಬಗ್ಗೆ ಮಂಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.


Share this with Friends

Related Post