Mon. Dec 23rd, 2024

ಛಾಪ ಕಾಗದ ದರ ಹೆಚ್ಚಳ ವಾಪಸಿಗೆ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಆಗ್ರಹ

Share this with Friends

ಮೈಸೂರು,ಫೆ.23: ಬಡವರ ಮೇಲೆ ಹೊರೆಯಾದ ಛಾಪ ಕಾಗದ ದರ ಹೆಚ್ಚಳ ಮಾಡಿರುವುದನ್ನು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕ ಖಂಡಿಸಿದೆ.

ಸರ್ಕಾರ ಕೂಡಲೇ ಹೊಸದರವನ್ನು ಹಿಂಪಡೆದು, ಹಳೆ ದರವನ್ನೇ ಮುಂದುವರೆಸಿ ಚಾಪಾಕಾಗದ (ಬಾಂಡ್ ಪೇಪರ್)
ಅಗ್ಗದ ದರದಲ್ಲಿ ಸಿಗುವ ಹಾಗೆ ವ್ಯವಸ್ಥೆ ಮಾಡಬೇಕೆಂದು ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಅಧ್ಯಕ್ಷ ಸಿ. ಎಸ್ ಚಂದ್ರಶೇಖರ್ ಮುಖ್ಯ ಮಂತ್ರಿಗಳಲ್ಲಿ ಮನವಿ ಮಾಡಿದ್ದಾರೆ.

ನಗರದ ಚಾಮುಂಡಿಪುರಂನಲ್ಲಿರುವ ಅಪೂರ್ವ ಹೋಟೆಲ್ ಸಭಾಂಗಣದಲ್ಲಿ ನಡೆದ ಗ್ರಾಹಕರ ಹಿತರಕ್ಷಣ ಸಭೆಯಲ್ಲಿ ಸರ್ಕಾರದ ಛಾಪಾಕಾಗದ ಪರಿಷ್ಕೃತ ದರವನ್ನು ಹಿಂಪಡೆಯುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು,ಜತೆಗೆ ಸಿಎಂಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು.

ಈ ವೇಳೆ ಸಿ. ಎಸ್.‌ಚಂದ್ರಶೇಖರ್ ಮಾತನಾಡಿ,ರೈತರು, ಶಾಲಾ ಮಕ್ಕಳು, ಜನಸಾಮಾನ್ಯರು, ಕೂಲಿ ಕಾರ್ಮಿಕರು, ವ್ಯಾಪಾರಸ್ಥರು, ಸೇರಿದಂತೆ ಎಲ್ಲರಿಗೂ ಕರಾರು ಪತ್ರ, ಕೋರ್ಟ್ ಅಫಿಡವಿಟ್, ಜಾತಿ ಪ್ರಮಾಣ ಪತ್ರ ಸಣ್ಣ ಹಿಡಿವಳಿದಾರರ ಪ್ರಮಾಣ ಪತ್ರ ಹೀಗೆ ಹಲವು ಕೆಲಸಗಳಿಗೆ 20, 50, 100, ರೂಪಾಯಿ ದರದಲ್ಲಿ ಚಾಪಾ ಕಾಗದ ಪತ್ರ ಸಿಗುತ್ತಿದ್ದವು ಎಂದು ಹೇಳಿದರು.

ಬಡವರಿಗೆ ಹಾಗೂ ಕೂಲಿ ಕಾರ್ಮಿಕರಿಗೆ ಈಗ ಮಾಡಿರುವ ನೂತನ ದರ 100, 500, ಮುಖಬೆಲೆಯ ಚಾಪಾ ಕಾಗದ ಪತ್ರಗಳಿಂದ ಹೆಚ್ಚಿನ ಹೊರೆಯಾಗಿದೆ. 10ಪಟ್ಟು ಏರಿಕೆ ಮಾಡಿದ್ದು ಸರಿಯಲ್ಲ ಎಂದು ‌ಬೇಸರ ಪಟ್ಟರು

ಬಡವರಿಗೆ ಹೊರೆಯಾಗುವುದರಿಂದ ತಕ್ಷಣವೇ ಹಳೆಯ ದರ ಪದ್ಧತಿಯನ್ನು ಜಾರಿಗೆ ತರಬೇಕು ಎಂದು ಗ್ರಾಹಕರ ಹಿತ ದೃಷ್ಟಿಯಿಂದ ಸರ್ಕಾರಕ್ಕೆ ಮನವಿ ಮಾಡಿದರು.

ಸಭೆಯಲ್ಲಿ ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಮೈಸೂರು ಘಟಕದ ಪ್ರಧಾನ ಕಾರ್ಯದರ್ಶಿ ವಿಕ್ರಮ ಅಯ್ಯಂಗಾರ್, ಸಂಚಾಲಕರಾದ ದಯಾನಂದ್, ಅಪೂರ್ವ ಸುರೇಶ್ ,ಅಜಯ್ ಶಾಸ್ತ್ರಿ, ಸತೀಶ್, ಮೈಲಾ ವಿಜಯ್ ಕುಮಾರ್, ನಂಜುಂಡ, ಸರ್ವಮಂಗಳ, ಭಾಗ್ಯಶ್ರೀ ಮತ್ತಿತರರು ಭಾಗವಹಿಸಿದ್ದರು.


Share this with Friends

Related Post