Wed. Jan 15th, 2025

ಅನಿತ ಪಿ.ಕೆ ಅವರ “ಭಕ್ತಿ ಭಾವ ಸಿಂಚನ” ಕವನ ಸಂಕಲನ ಬಿಡುಗಡೆ

Share this with Friends

ಲೇಖಕಿ ಅನಿತಾ .ಪಿ .ಕುಮಾರ್ ರವರಿಂದ ಮೂಡಿ ಬಂದ ಭಕ್ತಿ ಭಾವ ಸಿಂಚನ ಕವನ ಸಂಕಲನ ಲೇಖಕಿ ಅನಿತಾ.ಪಿ. ಕುಮಾರ್ ಮೂಲತಃ ಮೈಸೂರಿನವರು ಕನ್ನಡ ಸಾಹಿತ್ಯ ಲೋಕದಲ್ಲಿ ಹವ್ಯಾಸಿ, ಬರಹಗಾರ್ತಿಯಾಗಿದ್ದು ಉತ್ತಮ ಸಂಘಟಿಕಿಯಾಗಿ ಹಲವು ಪ್ರಕಾರಗಳ ಬಗ್ಗೆ ಅಧ್ಯಯನ ಮಾಡಿ ಕನ್ನಡ ಸಾಹಿತ್ಯ ಲೋಕದಲ್ಲಿ ಅನಿತ .ಪಿ.ಕೆ. ಎಂಬ ಕಾವ್ಯನಾಮದೊಂದಿಗೆ ಹವ್ಯಾಸಿ ಬರಹಗಾರ್ತಿಯಾಗಿದ್ದು ತಮ್ಮ ಮೂರನೇ ಕವನ ಸಂಕಲನ ಭಕ್ತಿ ಭಾವ ಸಿಂಚನ ಎಂಬ ಪುಸ್ತಕವನ್ನು ಇತ್ತೀಚಿಗೆ ಬೆಂಗಳೂರಿನಲ್ಲಿ ಮಂದಗೆರೆಕಲೆ, ಸಾಹಿತ್ಯ, ಸಾಂಸ್ಕೃತಿಕ ಪ್ರತಿಷ್ಠಾನ ಪುಷ್ಕರ ಪ್ರಿಂಟರ್ಸ್ ಹಾಗೂ ಪಬ್ಲಿಷರ್ಸ್ ಸಂಯುಕ್ತ ಆಶ್ರಯದಲ್ಲಿ ಲೋಕಾರ್ಪಣೆ ಮಾಡಿದರು.

ಭಕ್ತಿಭಾವ ಸಿಂಚನ ಕವನ ಸಂಕಲನದಲ್ಲಿ ಲೇಖಕಿ ಅನಿತಾ ರವರು ಮತ್ತೆ ಈ ದೇಶದ ಜನರನ್ನು ಭಕ್ತಿಯ ಭಾವ ಲೋಕಕ್ಕೆ ಕರೆದುಕೊಂಡು ಹೋಗಲು ಒಂದು ನೂತನ ಪ್ರಯತ್ನವನ್ನು ಮಾಡಿದ್ದಾರೆ ಇವರ ಭಕ್ತಿಗೀತೆಗಳಲ್ಲಿ ದೇವರ ಸ್ಮರಣೆ ಅದ್ಭುತವಾಗಿ ಮೂಡಿ ಬಂದಿದೆ ಆ ಮೂಲಕ ದೇವರ ಒಂದು ಕಲ್ಪನೆ ಕಣ್ಣಲ್ಲಿ ಮೂಡುವಂತೆ ಬರುವಂತೆ ಮಾಡಿದ್ದಾರೆ ನಂತರ ಪ್ರಾರ್ಥನೆ ಸಾಲುಗಳನ್ನು ಅದ್ಭುತವಾಗಿ ಬರೆದಿದ್ದಾರೆ.

ಭಕ್ತಿಗೀತೆಗಳಿಂದ ಭಾವಗೀತೆಗೆ ಹೊರಡುವ ಬರವಣಿಗೆಯಲ್ಲಿ ತುಂಬಾ ವೈಭವತೆಯನ್ನು ತೋರಿಸಿದ್ದಾರೆ ಮೈಸೂರಿನ ದಸರಾ ಹಬ್ಬದ ಜಂಬೂ ಸವಾರಿ ಬಗ್ಗೆ ಇರುವ ಒಂದು ಕವಿತೆ ಇಡೀ ಮೈಸೂರಿನ ಚಿತ್ರಣವನ್ನು ಕಣ್ಮುಂದೆ ತರಿಸುತ್ತದೆ ಹಾಗೂ ಮೈಸೂರಿನ ದಸರಾ ಚಿತ್ರಣವನ್ನು ಇಡೀ ಜಗತ್ತಿಗೆ ಪರಿಚಯಿಸುವ ದೃಷ್ಟಿಯಿಂದ ಓದುಗರ ಕಣ್ಮುಂದೆ ತಂದಿದ್ದಾರೆ ಕನ್ನಡ ತಾಯ್ನಾಡಿಗೆ ಯಾವುದಾದರೂ ರೂಪದಲ್ಲಿ ಸೇವೆ ಮಾಡಲು ಪಣ ತೊಟ್ಟಿರುವ ಲೇಖಕಿ ಅನಿತಾ ರವರು ದೇವರಲ್ಲಿ ಅಪಾರ ಶ್ರದ್ಧೆ ಭಯ ಭಕ್ತಿ ಹಾಗೂ ದೇವರು ಸರ್ವಸ್ವ ಎಂಬ ನಂಬಿಕೆಯಿಂದ ಭಕ್ತಿ ಭಾವ ಸಿಂಚನ ಕಂಡುಬರುತ್ತದೆ ಲೇಖಕಿ ಅನಿತಾ.ಪಿ.ಕುಮಾರ್ ರವರು ಶಾರದೆಗೆ ಶಿರಬಾಗುವೆ ,ಚಾಮುಂಡಿಯೇ , ಅಮ್ಮ ಬಾರಮ್ಮ , ನನ್ನ ಮಾತೆಯೇ ,ನನ್ನ ಕೃಷ್ಣ, ಕರುಣೆ ಯಿಲ್ಲವೇ, ಮಂಜುನಾಥನೇ, ಕೃಷ್ಣ ನಿನ್ನ ಚರಣದಲ್ಲಿ, ಜಂಬೂ ಸವಾರಿ , ವಿಜಯದಶಮಿ, ಮಾನವನಾಗುವೆಯ, ಗೆಲ್ಲುವ ಗುರಿಯಲ್ಲಿ, ಮನದ ಗಾನ, ಚಿಂತಿಸು ಮನವೇ, ನೇಗಿಲ ಯೋಗಿ, ಶ್ರಾವಣ ಬಂದೀತು, ಗೆಳೆಯನೆಂದರೆ, ಮನದಲ್ಲಿ ಮಾಧವ, ಈ ಕವನಗಳು ಓದುಗರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಿದೆ ನೇಗಿಲ ಯೋಗಿ ಕವನವು ಅನ್ನದಾತ ರೈತನ ಮೇಲೆ ಕುರಿತಾದ ಕವನವಾಗಿದ್ದು ರೈತರು ಚಳಿ ಮಳೆಗೆ ಎದುರದೇ ತನ್ನ ಕಾಯಕವನ್ನು ವರ್ಷಕ್ಕೆ ಎರಡು ಮೂರು ಬೆಳೆ ತೆಗೆಯಲು ಶ್ರದ್ಧಾವಹಿಸಿ ಮಾಡುತ್ತಾನೆ ಅವರು ಈ ದೇಶದ ಜನರಿಗೆ ಅನ್ನ ನೀಡುವ ಅನ್ನದಾತರು ಇವರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುವಂತೆ ಸರ್ಕಾರಗಳು ಗಮನ ಹರಿಸಿ ಇವರ ಜೀವನ ಮಟ್ಟವನ್ನು ಸುಧಾರಿಸಬೇಕು ಎಂದು ತಮ್ಮ ಕವನದ ಮೂಲಕ ಸರ್ಕಾರಕ್ಕೂ ಹಾಗೂ ಸಮಾಜಕ್ಕೂ ಉತ್ತಮ ಸಂದೇಶ ನೀಡಿದ್ದಾರೆ ಲೇಖಕಿ ಅನಿತಾ. ಪಿ .ಕುಮಾರ್


Share this with Friends

Related Post