Thu. Mar 5th, 2026

ಕೆ.ಆರ್’ಎಸ್ ಜಲಾಶಯ ನಿರ್ಮಿಸಲು ಟಿಪ್ಪುವಿನಿಂದ ಸಾಧ್ಯವಾಗುತ್ತಿರಲಿಲ್ಲ ಎಂದು ಉಲ್ಟಾ ಹೊಡೆದ ಸಚಿವ ಮಹದೇವಪ್ಪ

Share this with Friends

ಬೆಂಗಳೂರು, ಆಗಸ್ಟ್-05 : ಕನ್ನಂಬಾಡಿ ಕಟ್ಟೆ ಕಟ್ಟಲು ಮೊದಲು ಅಡಿಗಲ್ಲು ಹಾಕಿದ್ದು ಟಿಪ್ಪು ಸುಲ್ತಾನ ಎಂಬ ಹೇಳಿಕೆ ವಿವಾದವಾಗುತ್ತಿದ್ದಂತೆ ಸಮಾಜ ಕಲ್ಯಾಣ ಸಚಿವ ಹೆಚ್ ಸಿ ಮಹದೇವಪ್ಪ ಉಲ್ಟಾ ಹೊಡೆದಿದ್ದು, ಈಗ ಟಿಪ್ಪು ಸುಲ್ತಾನನಿಂದ ಕೆ.ಆರ್.ಎಸ್ ನಂತಹ ದೊಡ್ಡ ಜಲಾಶಯ ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ.

ಕೆ.ಆರ್,ಎಸ್ ಜಲಾಶಯ ಕಟ್ಟಿಸಿದ್ದು ಟಿಪ್ಪು ಸುಲ್ತಾನ್ ಅಂತ ನಾನು ಎಲ್ಲೂ ಹೇಳಿಲ್ಲ, ಇದನ್ನ ಕಟ್ಟಿದ್ದು ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನನ್ನ ಹೇಳಿಕೆಯನ್ನು ತಿರುಚಿ ಹೇಳಲಾಗಿದೆ ಅನಗತ್ಯ ಗೊಂದಲ ಸೃಷ್ಟಿಸ ಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

1911ರಲ್ಲಿ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರೇ ಕೆ ಆರ್ ಎಸ್ ಜಲಾಶಯಕ್ಕೆ ಅಡಿಗಲ್ಲು ಹಾಕಿದ್ದು, ಅವರೇ ನಿರ್ಮಿಸಿದ್ದು. ಟಿಪ್ಪು ಕಾಲದಲ್ಲಿ ಇದು ಸಾಧ್ಯವಾಗುತ್ತಿರಲಿಲ್ಲ ಮತ್ತು ಇಂತಹ ವಿನ್ಯಾಸವನ್ನು ವಿಶ್ವೇಶ್ವರಯ್ಯ ಮತ್ತು ಇಂಜಿನಿಯರ್’ಗಳ ತಂಡ ಮಾಡಿದೆ. ಟಿಪ್ಪುವಿಗೆ ಇಂತಹ ಯಾವ ಪರಿಕಲ್ಪನೆಗಳು ಈ ಕಾಲದಲ್ಲಿ ಬರಲು ಸಾಧ್ಯವಿಲ್ಲ ಎಂದು ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.


Share this with Friends

Related Post