Sat. Nov 2nd, 2024

ಭೈರವಿ ಗೌಡ್ತೀಯರ ಬಳಗದ ವಾರ್ಷಿಕೋತ್ಸವ

Share this with Friends

ಮೈಸೂರು,ಫೆ.24: ಮೈಸೂರಿನ ಹೆಬ್ಬಾಳು-ವಿಜಯನಗರ ಭೈರವಿ ಗೌಡ್ತೀಯರ ಬಳಗದ ವಾರ್ಷಿಕೋತ್ಸವ ಸಮಾರಂಭ ವಿಶೇಷವಾಗಿ ನೆರವೇರಿತು.

ಹೆಬ್ಬಾಳದಲ್ಲಿರುವ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶಾಖಾ ಮಠ, ಲಕ್ಷ್ಮೀಕಾಂತ ದೇವಸ್ಥಾನ, ಬಿ.ಜಿ.ಎಸ್ ಸಭಾಂಗಣದಲ್ಲಿ ವಾರ್ಷಿಕೋತ್ಸವದ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು
ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ‌ ಪೀಠಾಧ್ಯಕ್ಷರಾದ ಪೂಜ್ಯ ಜಗದ್ಗುರು ಶ್ರೀ ಡಾ|| ನಿರ್ಮಲಾನಂದನಾಥ ಮಹಾ ಸ್ವಾಮೀಜಿ ಹಾಗೂ‌ ಮೈಸೂರು ಶಾಕಾ ಮಠದ ಶ್ರೀ ಸೋಮೇಶ್ವರನಾಥ ಮಹಾ ಸ್ವಾಮೀಜಿ ವಹಿಸಿದ್ದರು.

ಅಧ್ಯಕ್ಷತೆಯನ್ನು ನಗರಪಾಲಿಕೆ ನಿಕಟ ಪೂರ್ವ ಸದಸ್ಯರಾದ ಪ್ರೇಮಾ ಶಂಕರೇಗೌಡ ವಹಿಸಿದ್ದರು.

ಇದೇ ವೇಳೆ‌ ವಿವಿಧ‌ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೈಸೂರು ವಿಶ್ವ ವಿದ್ಯಾನಿಲಯ
ಕುಲ ಸಚಿವರಾದ ಶೈಲಜಾ,ಮೈಸೂರು ಸೂಪರಿಂಟೆಂಡೆಂಟ್ ಆಫ್ ಸೆಂಟ್ರಲ್ ಟ್ಯಾಕ್ಸ್ ಲಕ್ಷ್ಮಿ. ಪಿ. ಗೌಡ,ರಾಜ್ಯ ಮಟ್ಟದ ಕ್ರೀಡಾ ಪಟು ಅನುಸೂಯಾ ವಿಜಯರಾಮೇಗೌಡ,
ಎಲ್ ಐ‌ ಸಿ ಆಫ್ ಇಂಡಿಯಾ ಗೆಲಾಕ್ಸಿ ಮೆಂಬರ್ ಶೋಭಾ ಮಂಜುನಾಥ್ ಹಾಗೂ
ಅಂತರಾಷ್ಟ್ರೀಯ ಯೋಗ ಪಟು
ಕುಮಾರಿ ಖುಷಿ ಅವರುಗಳನ್ನು ಸನ್ಮಾನಿಸಲಾಯಿತು.

ಭೈರವಿ ಗೌಡ್ತೀಯರ ಬಳಗದ ಸದಸ್ಯರು ಮತ್ತು ಪದಾಧಿಕಾರಿಗಳಾದ ಹೇಮಾ ನಂದೀಶ್, ಕೋಮಲ ವೆಂಕಟೇಶ್, ರಾಧಾ ಜಯರಾಮ, ಬಿ.ಸಿ. ರೇಣುಕಾ ಜಗದೀಶ್, ಸುಶೀಲ ಬಸವರಾಜು, ಉಮಾನಾಗೇಶ್, ರಾಧ ಲಂಕೇಗೌಡ, ರೇವತಿ ಕೃಷ್ಣಪ್ಪ ಕಾರ್ಯಕ್ರಮದ ರೂವಾರಿಗಳಾಗಿದ್ದರು.

ಮೂಡ ಮಾಜಿ ಅಧ್ಯಕ್ಷ ಮಾದೇಗೌಡರು ಹಾಗೂ ನಗರಪಾಲಿಕೆ ನಿಕಟಪೂರ್ವ ಸದಸ್ಯ ಕೆ.ವಿ ಶ್ರೀಧರ್ ಮತ್ತಿತರರು ಉಪಸ್ಥಿತರಿದ್ದರು.

ಈ ವೇಳೆ ಆಶೀರ್ವಚನ ನೀಡಿದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರು ಮಾತನಾಡಿ ಅಮ್ಮನ ಸ್ಥಾನ ಅತ್ಯಂತ ಪ್ರಮುಖವಾದುದು, ಸರಳವಾದದ್ದು ಆ ಸ್ಥಾನಕ್ಕೆ ತುಂಬಾ ಶಕ್ತಿ ಇರುತ್ತದೆ ಎಂದು ಹೇಳಿದರು.

ತಾಯಂದಿರು ಸೃಷ್ಟಿ ವಿಕಾಸದ ಒಂದು ಪ್ರಕ್ರಿಯೆಯಲ್ಲಿ ತುಂಬಾ ಪರಿಪೂರ್ಣ ವಿಕಸಿತವಾದ ಒಂದು ಡಿವೈನ್ ಪ್ರಾಡಕ್ಟ್ ಕ್ರಿಯೇಷನ್ ಇದ್ದಂತೆ ಎಂದು ಬಣ್ಣಿಸಿದರು.

ತಾಯಂದಿರು ಮನಸು ಮಾಡಿದರೆ ಪಾಂಡವರು ಹುಟ್ಟುತ್ತಾರೆ, ಗಾಂಧೀಜಿಯಂತವರು ಹುಟ್ಟುತ್ತಾರೆ,ನನ್ನಂತಹ ಸನ್ಯಾಸಿ ಹುಟ್ಟುತ್ತಾರೆ ರಾವಣನೂ ಹುಟ್ಟುತ್ತಾನೆ,ದುರ್ಯೋಧನ ಕೂಡಾ ಹುಟ್ಟುತ್ತಾನೆ.ಹಾಗಾಗಿ ತಾಯಂದಿರ ಕೊಡುಗೆ ಅಪಾರ ಅವರ ಶಕ್ತಿ ಉಪಯುಕ್ತವಾಗಬೇಕೆ ಎಂದು ಶ್ರೀಗಳು ಹೇಳಿದರು.


Share this with Friends

Related Post