Thu. Mar 5th, 2026

ಯಾವುದಾದರೂ ವಿವಿಗೆ ಕನಕದಾಸರ ಹೆಸರಿಡಲಿ: ಸರ್ಕಾರಕ್ಕೆ ಸಿದ್ದರಾಮಾನಂದ ಶ್ರೀಗಳು ಒತ್ತಾಯ

Share this with Friends

ಬೆಂಗಳೂರು: ರಾಜ್ಯದಲ್ಲಿರುವ ಉತ್ತಮ ವಿಶ್ವವಿದ್ಯಾಲಯಕ್ಕೆ ಕನಕದಾಸರ ಹೆಸರನ್ನು ನಾಮಕಾರಣ ಮಾಡಬೇಕು‌‌ ಎಂದು ತಿಂಥಣಿ ಬ್ರಿಡ್ಜ್‌‌ನ ಕನಕಗುರು ಪೀಠದ ಪೀಠಾಧ್ಯಕ್ಷ ಶ್ರೀ ಸಿದ್ದರಾಮಾನಂದ ಸ್ವಾಮೀಜಿ, ಸರ್ಕಾರಕ್ಕೆ ಮನವಿ ಮಾಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಶನಿವಾರ ರವೀಂದ್ರ ಕಲಾಕ್ಷೇತ್ರದಲ್ಲಿ ‘ಸಂತಶ್ರೇಷ್ಠ ಭಕ್ತ ಕನಕದಾಸರ’ ಜಯಂತಿ ಮತ್ತು ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಶ್ರೀಗಳು ಮಾತನಾಡಿದರು.

ಕನಕದಾಸರ ಸಂದೇಶ ನಮಗೆಲ್ಲಾ ದಾರಿದೀಪವಾಗಲಿ. ಕುರುಬರ ಸಂಸ್ಕೃತಿ ಉಳಿಸಲು ಅಕಾಡೆಮಿ ಮಾಡಬೇಕು. ರಾಜ್ಯಾದ್ಯಂತ ಕನಕ ಭವನ ನಿರ್ಮಿಸಬೇಕು. ದಾಸನಾದರೆ ದೇವರಿಗೆ, ಸತ್ಯಕ್ಕೆ‌ ದಾಸನಾಗು ಎಂದು ಕನಕದಾಸರು ಹೇಳುತ್ತಾರೆ. ಇವತ್ತಿನ ದಿನಮಾನಗಳಲ್ಲಿ ದಾರ್ಮಿಕ ನಂಬಿಕೆಗಳು ವ್ಯಾಪಾರಿಗಳಾಗಿ ಮಾರ್ಪಾಟ್ಟಿವೆ. ಭಾವನೆ, ಧರ್ಮ, ದೇವರ ಮುಂದಿಟ್ಟು ರಾಜಕೀಯ ಮಾಡಲಾಗುತ್ತಿದೆ. ಈ ದೇಶ‌ವು ವರ್ಣ, ವರ್ಗ ವ್ಯವಸ್ಥೆ ದೇಶವಲ್ಲ.‌ ಆದಿವಾಸಿ, ಮಾತೃ ಪ್ರಧಾನ ದೇಶವಾಗಿದೆ. ದೇವರು ಸರ್ವ ವ್ಯಾಪ್ತಿ. ಪ್ರತಿಯೊಬ್ಬರಲ್ಲೂ ದೇವರ ಇದ್ದೇನೆ‌. ಅನ್ನದಾನವೇ ಧರ್ಮ ಎಂದು ಪ್ರತಿಪಾದಿಸಿದರು.


Share this with Friends

Related Post