Mon. Dec 23rd, 2024

ಪ್ರಯಾಣಿಕರೇ ಗಮನಿಸಿ : ನಾಳೆ (ಫೆ.4) ಭಾನುವಾರ ಮೆಟ್ರೋ ಪ್ರಾರಂಭದ ವೇಳೆ ಬದಲಾಣೆ

Share this with Friends

ಬೆಂಗಳೂರು, ಫೆ.03 : ಬೆಂಗಳೂರು ಮೆಟ್ರೋ ರೈಲ್ವೆ ನಿಗಮವು (ಬಿಎಂಆರ್’ಸಿಎಲ್) ನಾಳೆ ಅಂದರೆ ಫೆ.4ರ ಭಾನುವಾರ ಮುಂಜಾನೆ ರೈಲು ಪ್ರಾರಂಭದ ಸಮಯವನ್ನು ಬದಲಾವಣೆ ಮಾಡಿ ಆದೇಶ ಹೊರಡಿಸಿದೆ.

ಕೇವಲ ಒಂದು ದಿನದ ಮಟ್ಟಿಗೆ ಈ ನಿರ್ಧಾರ ಮಾಡಿರುವ ನಮ್ಮ ಮೆಟ್ರೋ ಅಂದು 7 ಗಂಟೆಯ ಬದಲಾಗಿ ಮುಂಜಾನೆ 4.30ಕ್ಕೆ ಮೊದಲ ಸಂಚಾರ ಪ್ರಾರಂಭಿಸುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಟ್ಟಿದೆ.

ನಗರದಲ್ಲಿ ಭಾನುವಾರ ವಿಶ್ವ ಕ್ಯಾನ್ಸರ್ ದಿನ- ಕ್ಯಾನ್ ವಾಕ್ ಮತ್ತು ಎಕ್ಸ್ ಎಲ್ ರನ್’ಥಾನ್ ಕಾರ್ಯಕ್ರಮಗಳು ಇದ್ದು, ಇವುಗಳಲ್ಲಿ ಸುಗಮವಾಗಿ ಭಾಗವಹಿಸಲು ಮೆಟ್ರೋ ಜನಸ್ನೇಹಿಯಾಗಿ ಆಲೋಚಿಸಿದೆ.


Share this with Friends

Related Post