Mon. Dec 23rd, 2024

ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಕೀರ್ತಿ ತಂದಿದ್ದಾರೆ-ನಟಿ ಭಾವನಾ

Share this with Friends

ಬೆಂಗಳೂರು,ಫೆ.25: ಮಹಿಳೆಯರು ಇಂದು ಚಲನಚಿತ್ರ, ವಿಜ್ಞಾನ ತಂತ್ರಜ್ಞಾನ, ಕ್ರೀಡಾರಂಗ ರಾಜಕೀಯ ಎಲ್ಲ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ತೋರಿಸಿದ್ದಾರೆ ಎಂದು ನಟಿ ಭಾವನಾ ರಾಮಣ್ಣ ಬಣ್ಣಿಸಿದರು.

ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ವಿಧಾನಸಭಾ ಕ್ಷೇತ್ರದ ಶಂಕರಮಠ ವಾರ್ಡ್ ನಲ್ಲಿ ಸ್ಪಂದನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಬ್ಯಾಡ್ಮಿಂಟನ್ ಪಂದ್ಯಾವಳಿ ಸ್ಪಂದನ ಕಪ್-2024 ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸೈನಾ ನೇಹವಾಲ್, ಪಿ.ವಿ.ಸಿಂದು, ಜ್ವಾಲಗುಟ್ಟಾ ಆನೇಕ ಮಹಿಳೆಯರು ದೇಶಕ್ಕಾಗಿ ಆಡಿದ್ದಾರೆ,
ಕ್ರೀಡೆಯಲ್ಲಿ ಮಹಿಳೆಯರ ಪಾತ್ರ ಡೊಡ್ಡದು, ಒಲಂಪಿಕ್, ಏಷಿಯನ್ ಗೇಮ್ಸ್ ಅಂತರಾಷ್ಟ್ರಿಯ ಮಟ್ಟದಲ್ಲಿ ನಮ್ಮ ದೇಶದ ಮಹಿಳೆಯರು ಪದಕ ಗೆದ್ದು ರಾಷ್ಟ್ರಕ್ಕೆ ಕೀರ್ತಿ ತಂದಿದ್ದಾರೆ ಎಂದು ಹೇಳಿದರು.

ಸ್ಪಂದನ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ
ಎಮ್.ಶಿವರಾಜು ಅವರು ಮಾತನಾಡಿ ಮನುಷ್ಯ ಆರೋಗ್ಯವಂತರಾಗಿ ಬದುಕು ಸಾಗಿಸಲು ಮತ್ತು ರೋಗ ಮುಕ್ತ ಸಮಾಜ ನಿರ್ಮಾಣವಾಗಲು ಮಕ್ಕಳಿಂದ ಹಿಡಿದು ಹಿರಿಯರವರೆಗೂ ಕ್ರೀಡಾ ಚಟುವಟಿಕೆ ಮುಖ್ಯ ಎಂದು ತಿಳಿಸಿದರು.

ನಮ್ಮ ಕ್ಷೇತ್ರದಲ್ಲಿ ಉತ್ತಮ ಕ್ರೀಡಾಪಟುಗಳು ಇದ್ದಾರೆ, ಅವರಿಗೆ ಸಹಕಾರ, ಪ್ರೋತ್ಸಹ ನೀಡಲು ಬ್ಯಾಡ್ಮಿಂಟನ್ ಪಂದ್ಯಾವಳಿ ಆಯೋಜಿಸಲಾಗಿದೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಮೋಹನ್ ಕುಮಾರ್, ಅಂತರಾಷ್ಟ್ರೀಯ ಯೋಗಪಟು ಕಮಲಕಣ್ಣನ್, ಅಧ್ಯಕ್ಷ ಸುದೀಂದ್ರಚಾರ್, ಪ್ರಧಾನ ಕಾರ್ಯದರ್ಶಿ ವಿಶಾಲಾಕ್ಷ್ಮಿ ಶಿವರಾಜುರವರು, ಕೆಂಪೇಗೌಡ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಅಧ್ಯಕ್ಷ ರವಿಕಾಂತ್ ಮತ್ತಿತರರು ಹಾಜರಿದ್ದರು.


Share this with Friends

Related Post