Tue. Dec 24th, 2024

ಸಮುದ್ರದಾಳದಲ್ಲಿ‌ ಶ್ರೀಕೃಷ್ಣ ನಿಗೆ ಮೋದಿ ಪ್ರಾರ್ಥನೆ

Share this with Friends

ದ್ವಾರಕಾ,ಫೆ.26: ಸ್ಕೂಬಾ‌ ಡೈವಿಂಗ್ ಮೂಲಕ ಸಮುದ್ರದ ಆಳಕ್ಕೆ‌ ಇಳಿದ ಪ್ರಧಾನಿ ಮೋದಿಯವರು ಶ್ರೀಕೃಷ್ಣ ನಿಗೆ‌ ಪ್ರಾರ್ಥನೆ ಸಲ್ಲಿಸಿದ್ದಾರೆ.

ಗುಜರಾತ್ ನ ದ್ವಾರಕಾದಲ್ಲಿ ನಿನ್ನೆ‌ ದೇಶದ‌ ಅತಿ ಉದ್ದದ‌ ಸುದರ್ಶನ ‌ಸೇತುವೆ ಉದ್ಘಾಟನೆ ಹಾಗೂ
ವಿವಿಧ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಹೋಗಿದ್ದ ವೇಳೆ ಪುರಾತನ ನಗರವನ್ನು ವೀಕ್ಷಿಸಲು ಪ್ರಧಾನಿ ಇಚ್ಚಿಸಿದರು.

ನಂತರ ಸಮುದ್ರದ ನೀರಿನಲ್ಲಿ ಮುಳುಗಿರುವ ಪವಿತ್ರ ದ್ವಾರಕಾ ನಗರವನ್ನು ವೀಕ್ಷಿಸಿದ ಮೋದಿಯವರು ಅಲ್ಲೇ‌ ಪದ್ಮಾಸನ ಹಾಕಿ ಪ್ರಾರ್ಥಿಸಿ ಭಗವಾನ್ ಶ್ರೀ ಕೃಷ್ಣನ ಆಶೀರ್ವಾದ ಪಡೆದರು.

ನಂತರ ಶ್ರೀಕೃಷ್ಣನ ಪವಿತ್ರ ಹಾಗೂ‌ ಅಚ್ಚುಮೆಚ್ಚಿನ ನವಿಲುಗರಿಗಳನ್ನು ಇಟ್ಟು ಪ್ರಾರ್ಥಿಸಿದರು.

ಈ ವೇಳೆ ಮಾತನಾಡಿದ ನಾನು ಸಮುದ್ರದ ಆಳಕ್ಕೆ ಇಳಿದು ಪವತ್ರ ನಗರ ನೋಡಿದ ಕೂಡಲೇ‌ ಸಾಹಸಕ್ಕಿಂತ ಹೆಚ್ಚು ಭಕ್ತಿ ಉಂಟಾಯಿತು‌ ಎಂದು ಹೇಳಿದರು.

ಮೋದಿ ಸ್ಕೂಬಾ ಡೈವಿಂಗ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು.


Share this with Friends

Related Post