Fri. Mar 6th, 2026

ಕಾಳಿಂಗ ಸರ್ಪಗಳ ಸುರಕ್ಷಿತ ಸೆರೆಗೆ ಅರಣ್ಯಾಧಿಕಾರಿಗಳ ತಂಡ:ಈಶ್ವರ ಖಂಡ್ರೆ

Share this with Friends

ಚಿಕ್ಕಮಗಳೂರು:ಕಾಡಿನಿಂದ ನಾಡಿನತ್ತ ಬರುತ್ತಿರುವ ಆನೆ,ಚಿರತೆಯನ್ನು ಸೆರೆಹಿಡಿದು ಮರಳಿ ಕಾಡಿಗೆ ಬಡಲು ಆನೆ ಕಾರ್ಯಪಡೆ,ಚಿರತೆ ಕಾರ್ಯಪಡೆ ರಚಿಸಿರುವಂತೆ ಮಲೆನಾಡಿನಲ್ಲಿ ಜನವಸತಿ ಪ್ರದೇಶಕ್ಕೆ ಬರುವ ಕಾಳಿಗ ಸರ್ಪಗಳ ಸೆರೆಗೂ ಪ್ರತ್ಯೇಕ ತಂಡ ರಚಿಸುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ತಿಳಿಸಿದ್ದಾರೆ.

ಚಿಕ್ಕಮಗಳೂರಿನ ಅಜ್ಜಂಪುರದಲ್ಲಿ ಅಧಿಕಾರಿಗಳ ಸಭೆ ನಡೆಸಿದ ಅರಣ್ಯ ಸಚಿವ ಈಶ್ವರ ಖಂಡ್ರೆ ಮಲೆನಾಡು ಭಾಗದಲ್ಲಿ ಕಂಡುಬರುವ ಕಾಳಿಂಗ ಸರ್ಪಗಳು ಜನವಸತಿ ಪ್ರದೇಶದಲ್ಲಿ ಕಾಣಿಸಿಕೊಂಡಾಗ ಆಗುತ್ತಿರುವ ಸಮಸ್ಯೆಗಳ ಕುರತು‌ ಚರ್ಚಿಸಿದರು.ಚಿಕ್ಕಮಗಳೂರು, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಉಡುಪಿ ಭಾಗದಲ್ಲಿ ಕಾಳಿಂಗ ‌ಸರ್ಪಗಳು ಹೆಚ್ಚಾಗಿ ಕಂಡು ಬರುತ್ತಿವೆ. ಜನವಸತಿ ‌ಪ್ರದೇಶ ಸೇರಿದಂತೆ ಮನೆಯೊಳಗೆ, ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ ಇಂತಗ ಸಂದರ್ಭದಲ್ಲಿ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳ ಮೂಲಕ ಜನರು ಕಾಳಿಂಗ ಸರ್ಪ ಹಿಡಿಸುತ್ತಿದ್ದಾರೆ,ಅಸುರಕ್ಷಿತ ಮಾದರಿಯಲ್ಲಿ ಹಾವು ಹಿಡಿಯುವುದರಿಂದ ಅವುಗಳಿಗೂ ಸಮಸ್ಯೆಯಾಗಲಿದೆ ಹಾಗಾಗಿ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲು ವಿಶೇಷ ತಂಡವನ್ನು ರಚಿಸುವಂತೆ ಸೂಚನೆ ನೀಡಿದರು.

ಕಾಳಿಂಗ ಸರ್ಪವನ್ನು ಹಿಡಿಯಲು ಮತ್ತು ಸುರಕ್ಷಿತವಾಗಿ ಕಾಡಿಗೆ ಬಿಡಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ತರಬೇತಿ ನೀಡಬೇಕು, ಅರಣ್ಯ ಇಲಾಖೆಯ ವಿಭಾಗದ 5 ಸಿಬ್ಬಂದಿಗೆ ತರಬೇತಿ ನೀಡಬೇಕು ಎಂದು ಈಶ್ವರ ಖಂಡ್ರೆ ಸೂಚಿಸಿದ್ದು,ಒಬ್ಬ ಪ್ರಾದೇಶಿಕ ಅರಣ್ಯಾಧಿಕಾರಿಯೊಂದಿಗೆ ತರಬೇತಿ ಪಡೆದ 5 ಜನರ ತಂಡವನ್ನು ಕಾರ್ಯಪಡೆಗೆ ನೇಮಿಸಬೇಕು. ಈ ತಂಡ ಎಲಿಫೆಂಟ್ ಟಾಸ್ಕ್ ಫೋರ್ಸ್, ಲೆಫರ್ಡ್ ಟಾಸ್ಕ್ ಫೋರ್ಸ್ ರೀತಿ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ತಂಡವನ್ನೇ ನೇಮಿಸಲಾಗುತ್ತದೆ ಎನ್ನುವ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಿ ಕಾಳಿಂಗ ಸರ್ಪ ಕಾಣಿಸಿಕೊಂಡಾಗ ಇಲಾಖೆಯನ್ನು ಸಂಪರ್ಕಿಸುವಂತೆ ಜನಜಾಗೃತಿ ಮೂಡಿಸಲು ಸೂಚಿಸಿದರು.


Share this with Friends

Related Post