Mon. Dec 23rd, 2024

ಕುತೂಹಲ ಕೆರಳಿಸಿದ ಜನಾರ್ದನ ರೆಡ್ಡಿಸಿಎಂ,ಡಿಸಿಎಂ ಭೇಟಿ

Share this with Friends

ಬೆಂಗಳೂರು, ಫೆ.26: ಕಲ್ಯಾಣ ಕರ್ನಾಟಕ ರಾಜ್ಯ ಪ್ರಗತಿ ಪಕ್ಷದ ಸಂಸ್ಥಾಪಕ‌ ಹಾಗೂ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಅವರು ಸಿಎಂ,ಡಿಸಿಎಂ ಅವರನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ರಾಜ್ಯಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿರುವ ಸಂದರ್ಭದಲ್ಲೇ ಜನಾರ್ದನ ರೆಡ್ಡಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸ ಒದಗಿಸಿದೆ.

ಜನಾರ್ದನ ರೆಡ್ಡಿ ಅವರ ಜತೆ ಸಚಿವ ಶಿವರಾಜ ತಂಗಡಗಿ ಅವರು ಕೂಡ ಹಾಜರಿದ್ದರು, ಮುಖ್ಯಮಂತ್ರಿಗಳ ನಿವಾಸ ಕಾವೇರಿಯಲ್ಲಿ ಜನಾರ್ಧನ ರೆಡ್ಡಿ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡಿ ಬಹಳ ಹೊತ್ತು ಮಾತುಕತೆ ನಡೆಸಿದರು.

ಸಿಎಂ ಡಿಸಿಎಂ ಅವರನ್ನು ಭೇಟಿ ಮಾಡಿದ ನಂತರ ಎದುರಿಗೆ ಸಿಕ್ಕ ಮಾಧ್ಯಮದವರಿಗೆ ಜನಾರ್ಧನ ರೆಡ್ಡಿ, ಐತಿಹಾಸಿಕ ಆನೆಗೊಂದಿ ಉತ್ಸವಕ್ಕೆ ಆಹ್ವಾನಿಸಲು ಬಂದಿದ್ದೆ ಎಂದು ಹೇಳಿ ಮತ್ತೆ ಬೇರೆ ವಿಷಯ ಏನಿಲ್ಲಪ್ಪ ಎಂದು ನಗುತ್ತಾ ಮುಂದೆ ನಡೆದರು. ಆದರೂ ಈ ಭೇಟಿ, ಸಾಕಷ್ಟು ಕುತೂಹಲವನ್ನು ಕೆರಳಿಸಿರುವುದಂತೂ ಸತ್ಯ.


Share this with Friends

Related Post