ಬೆಂಗಳೂರು: ನಾವೇನು ನಾಗಪುರದಿಂದ ಯಾವ ನಿರ್ದೇಶನವನ್ನು ತರುವುದಿಲ್ಲ, ನಮ್ಮ ಹೈಕಮಾಂಡ್ ನಾಯಕರು ಆದಷ್ಟು ಬೇಗ ಸೂಕ್ತ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಪ್ರಸ್ತುತ ರಾಜ್ಯ ರಾಜಕೀಯ ವಿದ್ಯಮಾನಗಳ ಕುರಿತು ಕಾಂಗ್ರೆಸ್ ಮುಖಂಡ ಬಿಕೆ ಹರಿಪ್ರಸಾದ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ವಿಚಾರ ಸಾಕಷ್ಟು ಚರ್ಚೆಯಲ್ಲಿದೆ,ಆದಷ್ಟು ಬೇಗ ಕೇಂದ್ರದ ನಾಯಕರು ರಾಜ್ಯದ ನಾಯಕರನ್ನು ದೆಹಲಿಗೆ ಕರೆಸಿಕೊಂಡು ರಾಜ್ಯದ ನಾಯಕತ್ವದ ಕುರಿತು ಮಾತನಾಡಿ ಗೊಂದಲ ಪರಿಹರಿಸಬೇಕು, ಈ ಸಂಬಂಧ ನಮ್ಮ ಹಿರಿಯ ನಾಯಕ ಕೆ.ಹೆಚ್.ಮುನಿಯಪ್ಪ ಅವರ ಅಭಿಪ್ರಾಯವೇ ನನ್ನ ಅಭಿಪ್ರಾಯವಾಗಿದೆ ಎಂದರು.
ಕೇವಲ 140 ಶಾಸಕರು ಮಾತ್ರ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಿಲ್ಲ, ಬಿಜೆಪಿ, ಮೋದಿ, ಅಮಿತ್ ಶಾ ಬೇಡ ಎನ್ನುವ ಕಾಂಗ್ರೆಸ್ಸೇತರ ಜನಸಾಮಾನ್ಯರು ಕಾಂಗ್ರೆಸ್ಸನ್ನ ಗೆಲ್ಲಿಸಬೇಕು ಎಂದು ಗೆಲ್ಲಿಸಿದ್ದಾರೆ ಅವರಿಗೆ ನೋವಾಗದೆ ರೀತಿ ನಡೆದುಕೊಳ್ಳಬೇಕು ಎಲ್ಲಾ ನಾವೇ ಗೆಲ್ಲಿಸಿದ್ದೇವೆ ಎನ್ನುವುದು ಸರಿಯಲ್ಲ ಆದಷ್ಟು ಬೇಗ ಇದಲ್ಲ ಪರಿಹಾರಗೊಳ್ಳಬೇಕು ಆದಷ್ಟು ಬೇಗ ವರಿಷ್ಠರು ಈ ಸಮಸ್ಯೆಯನ್ನು ಪರಿಹರಿಸಬೇಕು ಎಂದರು.
ಗಂಭೀರವಾಗಿ ಸೂಕ್ಷ್ಮವಾಗಿ ಚರ್ಚೆ ನಡೆದು ನಿರ್ಧಾರ ತೆಗೆದುಕೊಂಡು ಎಲ್ಲವನ್ನೂ ಗಮನಿಸಿ ತೀರ್ಮಾನ ತೆಗೆದುಕೊಂಡಾಗ ಅದನ್ನು ಹೈಕಮಾಂಡ್ ಎನ್ನುತ್ತಾರೆ.ನಮ್ಮಲ್ಲೂ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಿದ್ದಾರೆ, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದ್ದಾರೆ ಅವರೆಲ್ಲಾ ಸೇರಿ ನಿರ್ಧಾರ ಮಾಡಲಿದ್ದಾರೆ, ಜನಸಾಮಾನ್ಯರು ಕಾರ್ಯಕರ್ತರ ಆಸೆಗೆ ಅನುಗುಣವಾಗಿ ನಿರ್ಧಾರ ಇರಬೇಕು ಆ ರೀತಿ ನಿರ್ಧಾರ ನಮ್ಮ ಹೈಕಮಾಂಡ್ ತೆಗೆದುಕೊಳ್ಳಲಿದೆ, ನಾಗಪುರದಿಂದ ನಾವು ಡೈರೆಕ್ಷನ್ಸ್ ಗಳನ್ನು ತರುವುದಿಲ್ಲ ಎಂದು ಬಿಜೆಪಿ ನಿರ್ಧಾರಗಳನ್ನು ಟೀಕಿಸಿದರು.
ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್,ಸಿಎಂ ಸಿದ್ದರಾಮಯ್ಯ ಅವರನ್ನೆಲ್ಲಾ ಭೇಟಿಯಾಗಿದ್ದ ಕುರಿತು ಸ್ಪಷ್ಟೀಕರಣ ನೀಡಿದ ಬಿಕೆ ಹರಿಪ್ರಸಾದ್, ಇವರೆಲ್ಲ ಬಿಜೆಪಿಯವರೋ, ಆರ್ ಎಸ್ ಎಸ್ ನವರಲ್ಲ ಎಲ್ಲಾ ನಮ್ಮ ಪಕ್ಷದ ನಾಯಕರು, ಅಲ್ಲದೆ ನಮ್ಮ ಸ್ನೇಹಿತರು ನಮ್ಮ ಹಳೆಯ ಸ್ನೇಹಿತರು ನೋಡಬೇಕು ಅನ್ನಿಸಿತು ಹೋಗಿದ್ದೆ ಅಷ್ಟೇ ಎಂದು ಡಿನ್ನರ್ ಮೀಟ್ ಗಳಿಗೆ ಸಮಜಾಯಿಷಿ ನೀಡಿದರು.

