Mon. Dec 23rd, 2024

ಬಿಜೆಪಿ‌ ಪ್ರಚಾರ ರಥಗಳ ಮೂಲಕ ಜನರಲ್ಲಿ ಜಾಗೃತಿ

Share this with Friends

ನವದೆಹಲಿ,ಫೆ.27: ಲೋಕಸಭೆ ಚುಣಾವಣೆಗೆ ಇನ್ನೂ ದಿನಾಂಕ ಘೋಷಣೆ ಯಾಗದಿದ್ದರೂ ಎಲ್ಲಾ ರಾಜಕೀಯ ಪಕ್ಷಗಳು ಪ್ರಚಾರ‌ ಶುರುವಿಟ್ಟುಕೊಂಡಿವೆ.

ಇದರ ನಡುವೆ ಬಿಜೆಪಿ ಒಂದು‌ ಹೆಜ್ಜೆ ಮುಂದೆ ಹೋಗಿ ಪ್ರಚಾರ ರಥಗಳನ್ನು ಅಣಿಗೊಳಿಸಿ ಚಾಲನೆ ನೀಡಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿ ಗೊಳಿಸಿರುವ ಜನ ಸ್ನೇಹಿ ಯೋಜನೆಗಳು ಮತ್ತು ಅಭಿವೃದ್ಧಿ ಯೋಜನೆಗಳನ್ನು ಈ ಪ್ರಚಾರ‌ ರಥದ ಮೂಲಕ ಸಾರ್ವಜನಿಕರಿಗೆ ತಿಳಿಸಲಾಗುತ್ತಿದೆ.

ಬಿಜೆಪಿ ಸರ್ಕಾರದ ಜನ ಸ್ನೇಹಿಯೋಜನೆಗಳು
ಪ್ರಚಾರ ಪಡಿಸುವ ವಿಕಸಿತ ಭಾರತ್ ಮೋದಿಯ ಗ್ಯಾರಂಟಿ ಎಂಬ ವಿಡಿಯೋ ಪ್ರಚಾರ ರಥಗಳಿಗೆ ಪಕ್ಷದ‌ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ನಿನ್ನೆ ಚಾಲನೆ ನೀಡಿದ್ದಾರೆ,ಈ ರಥಗಳಿಗೆ ಎಲ್ ಇ ಡಿ ಸ್ಕ್ರೀನ್ ಅಳವಡಿಸಲಾಗಿದ್ದು,ಈ ಮೂಲಕ ಪ್ರಧಾನಿ ಮೋದಿಯವರ ಸಾಧನೆಗಳನ್ನು ತಿಳಿಸಲಾಗುತ್ತಿದೆ.

ಈ ರಥಗಳು ಎಲ್ಲಾ ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಲಿವೆ,ಅಲ್ಲದೆ ಬಿಜೆಪಿಯ ಪ್ರಣಾಳಿಕೆ ಸಂಕಲ್ಪ ಪತ್ರಕ್ಕೆ ಸಲಹೆಗಳನ್ನೂ ಜನತೆ ನೀಡಬಹುದಾಗಿದೆ.

ಬಿಜೆಪಿ ಸಾಧನಗಳ ಪ್ರಚಾರ ಪ್ರಣಾಳಿಕೆಗೆ ಸಲಹೆ ಸ್ವೀಕಾರಕ್ಕೆ ಈ ಮೊಬೈಲ್
9090902024 ನಂಬರ್ ಸಹಾ ನೀಡಲಾಗಿದೆ.ಈ ನಂಬರ್ ಗೆ ಮಿಸ್ಡ್ ಕಾಲ್ ಕೊಟ್ಟು ಜನರು ಸಲಹೆ ನೀಡಬಹುದಾಗಿದೆ ಎಂದು‌ ಜೆ. ಪಿ.ನಡ್ಡಾ ತಿಳಿಸಿದ್ದಾರೆ.


Share this with Friends

Related Post