Fri. Mar 6th, 2026

ಪ್ರವಾಸೋದ್ಯಮ ಸಂತೋಷ, ತೃಪ್ತಿ ಮತ್ತು ಜ್ಞಾನೋದಯದ ಅನ್ವೇಷಣೆಯಾಗಿದೆ: ಹೆಚ್.ಕೆ ಪಾಟೀಲ್

Share this with Friends

ಬೆಂಗಳೂರು:”ಪ್ರವಾಸೋದ್ಯಮವು ಸಂತೋಷ, ತೃಪ್ತಿ ಮತ್ತು ಜ್ಞಾನೋದಯದ ಅನ್ವೇಷಣೆಯಾಗಿದೆ. ಕರ್ನಾಟಕಕ್ಕೆ ಭೇಟಿ ನೀಡುವವರು ನಮ್ಮ ಆಧ್ಯಾತ್ಮಿಕ ಕೇಂದ್ರಗಳಲ್ಲಿ ಆಂತರಿಕ ಶಾಂತಿಯನ್ನು, ನಮ್ಮ ಹಬ್ಬಗಳಲ್ಲಿ ಸಂತೋಷವನ್ನು ಮತ್ತು ನಮ್ಮ ಇತಿಹಾಸಗಳಲ್ಲಿ ಜ್ಞಾನೋದಯವನ್ನು ಕಂಡುಕೊಳ್ಳಬೇಕೆಂದು ನಾವು ಬಯಸುತ್ತೇವೆ” ಎಂದು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಹೇಳಿದರು.

ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ್ದ ಪ್ರತಿಷ್ಠಿತ ಕರ್ನಾಟಕ ಸಾಂಸ್ಕೃತಿಕ ರಾಜತಾಂತ್ರಿಕ (ಡಿಪ್ಲೊಮಸಿ) ಕೋಶದ (ಕೆಸಿಸಿಡಿ) ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ರಾಜ್ಯ ಪ್ರವಾಸೋದ್ಯಮವನ್ನು ಅಂತರರಾಷ್ಟ್ರೀಯ ತೊಡಗಿಸಿಕೊಳ್ಳುವಿಕೆ ಮತ್ತು ಆರ್ಥಿಕ ಅಭಿವೃದ್ಧಿಯ ಕೇಂದ್ರ ಸ್ತಂಭವಾಗಿ ಉನ್ನತೀಕರಿಸುವ ಕರ್ನಾಟಕದ ಈ ವಿನೂತನ ಕಾರ್ಯತಂತ್ರ ಸಮಾವೇಶವು ಮಹತ್ವದ ಮೈಲಿಗಲ್ಲಿಗೆ ಸಾಕ್ಷಿಯಾಗಲಿದೆ.ಸಾಂಸ್ಕೃತಿಕ ಪಾಲುದಾರಿಕೆಗಳು, ಪ್ರವಾಸೋದ್ಯಮ ಪ್ರಚಾರ, ಜ್ಞಾನ ವಿನಿಮಯ ಮತ್ತು ವ್ಯಾಪಾರ ಸೌಲಭ್ಯದ ಮೂಲಕ ಕರ್ನಾಟಕ ಮತ್ತು ರಾಜತಾಂತ್ರಿಕ ಕಾರ್ಯಾಚರಣೆಗಳ ನಡುವಿನ ಸಹಯೋಗವನ್ನು ಹೆಚ್ಚಿಸಲು ಕೆಸಿಸಿಡಿಯನ್ನು ಒಂದು ಕಾರ್ಯತಂತ್ರದ ವೇದಿಕೆಯಾಗಿ ರೂಪಿಸಲಾಗಿದೆ. ಈ ಉಪಕ್ರಮದ ಭಾಗವಾಗಿ, ಕರ್ನಾಟಕ ಮತ್ತು ಪ್ರಪಂಚದಾದ್ಯಂತದ ರಾಜತಾಂತ್ರಿಕ ಕಾರ್ಯಾಚರಣೆಗಳ ನಡುವೆ ಸಹಕಾರ, ಸಾಂಸ್ಕೃತಿಕ ಡಿಪ್ಲೊಮಸಿ ಮತ್ತು ಪ್ರವಾಸೋದ್ಯಮದಲ್ಲಿ ತೊಡಗಿಕೊಳ್ಳುವಿಕೆಯನ್ನು ಬೆಳೆಸುವ, ಪ್ರೋತ್ಸಾಹಿಸುವ ಗುರಿಯನ್ನು ಹೊಂದಿರುವ ಹೊಸ ಚೌಕಟ್ಟನ್ನು ಇಲಾಖೆಯು ಪ್ರಸ್ತುತಪಡಿಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕರ್ನಾಟಕದ ಪರಂಪರೆಯನ್ನು ಜ್ಞಾನ, ಸಂವಾದ ಮತ್ತು ಸಾರ್ವತ್ರಿಕ ಮಾನವೀಯ ಮೌಲ್ಯಗಳ ತವರೂರು ಎಂದು ಪುನರುಚ್ಚರಿಸಿದ ಅವರು, ಬಸವಣ್ಣ ಮತ್ತು ಕುವೆಂಪು ಅವರಂತಹ ಐತಿಹಾಸಿಕ ಪುರುಷರನ್ನು ನೆನಪಿಸಿಕೊಂಡು, ಅವರು ಕರ್ನಾಟಕದ ದೀರ್ಘಕಾಲೀನ ಜಾಗತಿಕ ಸಾಂಸ್ಕೃತಿಕ ರಾಜತಾಂತ್ರಿಕ ಸಂಪ್ರದಾಯವನ್ನು ಬಲಪಡಿಸಿದರು ಎನ್ನುತ್ತಾ ಹಂಪಿ ಮತ್ತು ಐಹೊಳೆಯಿಂದ ಅದರ ಪ್ರಾಚೀನ ಕರಾವಳಿ ಮತ್ತು ಆಧ್ಯಾತ್ಮಿಕ ಪರಂಪರೆಯವರೆಗೆ ಕರ್ನಾಟಕದ ಪ್ರವಾಸೋದ್ಯಮ ಸಂಪತ್ತಿನ ವೈವಿಧ್ಯತೆಯ ಬಗ್ಗೆ ತಿಳಿಸಿ ಹೇಳಿದ ಸಚಿವರು, ಜಾಗತಿಕ ಸ್ಥಾನೀಕರಣ, ಸುಸ್ಥಿರ ಅಭಿವೃದ್ಧಿ, ಸುರಕ್ಷತೆ ಮತ್ತು ಭದ್ರತೆ ಮತ್ತು ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಪ್ರವಾಸೋದ್ಯಮ ನೇತೃತ್ವದ ಸಮೃದ್ಧಿಯನ್ನು ಪಸರಿಸುವತ್ತ ಗಮನ ಕೇಂದ್ರೀಕರಿಸುವ ಪ್ರವಾಸೋದ್ಯಮ ನೀತಿ 2024–29ರ ಅಡಿಯಲ್ಲಿ ಕರ್ನಾಟಕದ ಮಹತ್ವಾಕಾಂಕ್ಷೆಯ ಗುರಿಗಳನ್ನು ಸಚಿವರು ಪುನರುಚ್ಚರಿಸಿದರು.

ಕರ್ನಾಟಕದ ಬೆಳೆಯುತ್ತಿರುವ ಜಾಗತಿಕ ಸ್ಥಾನಮಾನ ಮತ್ತು ಪ್ರವಾಸೋದ್ಯಮವನ್ನು ಅಂತರರಾಷ್ಟ್ರೀಯ ಸಂಬಂಧಗಳಿಗೆ ಪ್ರವೇಶ ದ್ವಾರವಾಗಿ ಪರಿವರ್ತಿಸುವ ಅದರ ದೃಷ್ಟಿಕೋನವನ್ನು ಒತ್ತಿ ಹೇಳಿದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕರ್ನಾಟಕ ಸರ್ಕಾರವು ಪ್ರವಾಸೋದ್ಯಮವನ್ನು ಕೇವಲ ಆರ್ಥಿಕ ಚಟುವಟಿಕೆಯಾಗಿ ನೋಡದೆ ನಮ್ಮ ಜಾಗತಿಕ ಸಂಪರ್ಕ ಮತ್ತು ಆರ್ಥಿಕ ಅಥವಾ ಸಾಂಸ್ಕೃತಿಕ ಪ್ರಭಾವದ ಮೂಲಕ ಅಂತರರಾಷ್ಟ್ರೀಯ ಸಂಬಂಧಗಳಿಗೆ ಒತ್ತು ನೀಡುವ ಪ್ರಮುಖ ಅಂಶವಾಗಿ ನೋಡುತ್ತದೆ. ಈ ಸಮಾವೇಶವು ಕರ್ನಾಟಕವನ್ನು ಜಾಗತಿಕವಾಗಿ ಮೆಚ್ಚುಗೆ ಪಡೆದ ಮತ್ತು ಸಾಂಸ್ಕೃತಿಕವಾಗಿ ಅದ್ಬುತ ತಾಣವಾಗಿ ಪರಿವರ್ತಿಸುವಲ್ಲಿ ನಿರ್ಣಾಯಕ ಹೆಜ್ಜೆಯನ್ನು ಗುರುತಿಸುತ್ತದೆ” ಎಂದು ಅವರು ಹೇಳಿದರು.

 


Share this with Friends

Related Post