ಬೆಂಗಳೂರು,ಫೆ.27: ಇತ್ತೀಚೆಗಂತೂ ಮೋಸ ಹೋಗೋದು ಸರ್ವೇ ಸಾಮಾನ್ಯ ಎಂಬಂತಾಗಿಬಿಟ್ಟಿದೆ.
ಜನ ಎಚ್ಚೆತ್ತುಕೊಳ್ಳುವ ತನಕ ಇದು ಹೀಗೇ ಮುಂದುವರಿಯುತ್ತದೆ.ಅದರಲ್ಲೂ ಆನ್ ಲೈನ್ ಶಾಪಿಂಗ್ ಮಾಡಿ ಇಟ್ಟಿಗೆ,ಕಲ್ಲು ಮತ್ತಿತರ ವಸ್ತು ಗಳು ಬಂದು ಬೇಸ್ತು ಬಿದ್ದವರು ಬಹಳ ಇದ್ದಾರೆ,ಆದರೂ ಮೋಸ ಹೋಗೋದು ಮುಂದುವರುದಿದೆ ಇದಕ್ಕೆ ಇಲ್ಲೊಂದು ಉದಾಹರಣೆ ಇದೆ.
ಆನ್‌ಲೈನ್ ಶಾಪಿಂಗ್ ಲಿಂಕ್ ಒಂದರಲ್ಲಿ ಕೇವಲ 49 ರು.ಗೆ 48 ಕೋಳಿ ಮೊಟ್ಟೆ ಆಫರ್ ನೋಡಿ ಮಹಳೆಯೊಬ್ಬರು ಮೋಸ ಹೋಗಿದ್ದಾರೆ
ಕೇವಲ 49 ರೂಪಾಯಿಗೆ 48 ಮೊಟ್ಟೆ ಆಫರ್ ನೋಡಿ ಖುಷಿಯಿಂದ ಮೊಟ್ಟೆ ಖರೀದಿಸಲು ಮುಂದಾಗಿ ಬರೋಬ್ಬರಿ 48 ಸಾವಿರ ರೂ ಕಳೆದುಕೊಂಡಿದ್ದಾರೆ ಮಹಿಳೆ.
ಅರ್ಚನಾ ಸಿಂಗ್ ಎಂಬವರ ಮೊಬೈಲ್‌ನ ಇ-ಮೇಲ್‌ಗೆ ಫೆ.17ರಂದು ‘ನ್ಯೂಟ್ರಿಫ್ರೆಶ್ ಎಗ್ ಟಾಟಾ’ ಎಂಬ ಆನ್‌ಲೈನ್ ಶಾಪಿಂಗ್ ಲಿಂಕ್ ಬಂದಿದೆ. ಇದನ್ನು ನೋಡಿ ಆಕೆ ಲಿಂಕ್ ಕ್ಲಿಕ್ಕಿಸಿದ್ದಾರೆ, 4 ಡಜನ್ ಫ್ರೆಶ್ ಕೋಳಿಮೊಟ್ಟೆಗೆ ಕೇವಲ 49 ರು. ಎಂಬ ಶೀರ್ಷಿಕೆಯ ಆಫರ್ ಕಂಡು ಬಂದಿದೆ.
ಬಳಿಕ ಆ ಲಿಂಕ್‌ನಲ್ಲಿ ಕೇಳಲಾಗಿದ್ದ ಎಲ್ಲಾ ಮಾಹಿತಿಯನ್ನು ಅರ್ಚನಾ ಸಿಂಗ್ ಭರ್ತಿ ಮಾಡಿದ್ದಾರೆ. 49 ರು. ಪಾವತಿಸಲು ಕ್ರೆಡಿಟ್ ಕಾರ್ಡ್ ಮಾಹಿತಿ ಭರ್ತಿ ಮಾಡಿದಾಗ ಮೊಬೈಲ್‌ಗೆ ಒಟಿಪಿ ಬಂದಿದೆ.
ಒಟಿಪಿ ಸಂಖ್ಯೆಯನ್ನು ನಮೂದಿಸಿದಾಗ ಕ್ರೆಡಿಟ್ ಕಾರ್ಡ್ ನಿಂದ ಏಕಾಏಕಿ 48 ಸಾವಿರ ರು. ಕಡಿತವಾಗಿದೆ ಎಂಬ ಸಂದೇಶ ಮೊಬೈಲ್‌ಗೆ ಬಂದಿದೆ.
49 ರು. ಬದಲು 48 ಸಾವಿರ ರು. ಕಡಿತ ವಾಗಿದ್ದನ್ನು ಕಂಡು ಗಾಬರಿಗೊಂಡ ಅರ್ಚನಾ ಸಿಂಗ್ ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ.
ಆಕೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.ಜತೆಗೆ ಈ ಆನ್ ಲೈನ್ ಶಾಪಿಂಗ್ ಬಗ್ಗೆ ಎಚ್ಚರದಿಂದ ಇರಬೇಕೆಂದು ಪೊಲೀಸ್ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.