Fri. Mar 6th, 2026

ಬೆಂಗಳೂರಿಗರ ಗಮನಕ್ಕೆ: ಡಿ.17ರಂದು ಕಾವೇರಿ ನೀರು ಸರಬರಾಜಿನಲ್ಲಿ ವ್ಯತ್ಯಯ

Share this with Friends

ಬೆಂಗಳೂರು: ಕಾವೇರಿ ನೀರಿನ ಮೇಲೆ ಅವಲಂಭಿಸಿರುವ ಬೆಂಗಳೂರಿಗರು ಡಿ.17 ರಂದ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು, ಅಂದು ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯಲ್ಲಿ ತುರ್ತು ದುರಸ್ಥಿ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ಹಲವು ಭಾಗದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಈ ಕುರಿತು ಮಾಹಿತಿ ನೀಡಿರುವ ಬೆಂಗಳೂರು ಜಲಮಂಡಳಿ ಅಧ್ಯಕ್ಷರಾದ ಡಾ.ವಿ.ರಾಮ್ ಪ್ರಸಾತ್ ಮನೋಹರ್, ಬೆಂಗಳೂರು ನಗರದ ಕೆಲವು ಭಾಗಗಳಿಗೆ ನೀರು ಸರಬರಾಜು ಮಾಡುವ  ಕಾವೇರಿ 5ನೇ ಹಂತದ ನೀರು ಸರಬರಾಜು ಯೋಜನೆಯಲ್ಲಿ ಸೋರಿಕೆ ಕಂಡುಬಂದಿರುವ ಕಾರಣ ತುರ್ತು ದುರಸ್ಥಿಗೆ ಬೆಂಗಳೂರು ಜಲಮಂಡಳಿ ಮುಂದಾಗಿದ್ದು, ಡಿ.17ರಂದು ಬೆಂಗಳೂರು ನಗರದ ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದರು.

ಕಾವೇರಿ 5ನೇ ಹಂತದ 3 ಸಾವಿರ ಎಂಎಂ ವ್ಯಾಸದ  ಟ್ರಾನ್ಸ್ ಮಿಷನ್ ಲೈನ್ (Transmission line) ನ ಸ್ಕವರ್ ವಾಲ್ವ್ ಹಾನಿಯಾಗಿ ಸೋರಿಕೆಯಾಗುತ್ತಿದೆ. ಸದರಿ ಸೋರಿಕೆಯನ್ನು ತಡೆಗಟ್ಟಿ ಬೆಂಗಳೂರು ಮಹಾನಗರಕ್ಕೆ ಸುಗಮ ಮತ್ತು ಸುಲಲಿತವಾಗಿ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ತುರ್ತಾಗಿ ದುರಸ್ಥಿ ಕಾರ್ಯವನ್ನು ಜಲಮಂಡಳಿ ಕೈಗೆತ್ತಿಕೊಂಡಿದ್ದು, ಡಿ.17ರಂದು(ಬುಧವಾರ) ಬೆಳಗ್ಗೆ 7ರಿಂದ ರಾತ್ರಿ 10ರವರೆಗೆ ಕಾವೇರಿ 5ನೇ ಹಂತದ ನೀರು ಸರಬರಾಜಾಗುವ ಪ್ರದೇಶಗಳಲ್ಲಿ ನೀರಿನ ವ್ಯತ್ಯಯವಾಗಲಿದೆ.

ನೀರು ಸರಬರಾಜುವಿನಲ್ಲಿ ವ್ಯತ್ಯಯ ಉಂಟಾಗಲಿರುವ ಪ್ರದೇಶಗಳು:

 ಅನಂತಪುರ, ದೊಡ್ಡಬೆಟ್ಟಹಳ್ಳಿ, ಚಿಕ್ಕಬೆಟ್ಟಹಳ್ಳಿ ಹಾರೋಹಳ್ಳಿ, ಕೆಂಚನಹಳ್ಳಿ, ಗೋವಿಂದಪುರ, ವಾಸುದೇವಪುರ, ಮಂಚೇನಹಳ್ಳಿ, ಕಟ್ಟಿಗೇನಹಳ್ಳಿ, ಶ್ರೀನಿವಾಸಪುರ, ಬೆಳ್ಳಳ್ಳಿ, ತಿರುಮೆನಹಳ್ಳಿ, ಚೊಕ್ಕನಹಳ್ಳಿ, ದಾಸರಹಳ್ಳಿ, ರಾಚೇನಹಳ್ಳಿ, ಥಣೀಸಂದ್ರ, ಚಳ್ಳೆಕೇರೆ, ಹೊರಮಾವು ಆಗರ, ಅಮಾನಿ ಭೈರತಿಖಾನೆ, ಗೆದ್ದಲಹಳ್ಳಿ, ಕೊತ್ತನೂರು ನಾರಾಯಣಪುರ, ಕೊತ್ತನೂರು, ಎನ್ ನಾಗೇನಹಳ್ಳಿ, ಕೈಲಾಸನ ಹಳ್ಳಿ, ಭೈರತಿ, ಬಿಳಿಶಿವಹಳ್ಳಿ, ಬಳಗೆರೆ, ಬೆಳ್ಳಂದೂರು ಅಮಾನಿಕೆರೆ, ಬೆಳತ್ತೂರು, ಚೆನ್ನಸಂದ್ರ, ದೇವರಬೀಸನಹಳ್ಳಿಯಲ್ಲಿ ನೀರಿನ ವ್ಯತ್ಯಯವಾಗಿದೆ.

ಹಾಗೆಯೇ ಗುಂಜೂರು, ಅಗದೂರು, ಕಾಡಬೀಸನಹಳ್ಳಿ, ಕಾಯಮ್ಮನ ಅಗ್ರಹಾರ, ಕಾಡೋಗೋಡಿ ಪ್ಲಾಂಟೆಸನ್ ಕಾಣೇಕಂಡ್ಯ, ಕುಂಬೇನ ಅಗ್ರಹಾರ, ನಾಗೋಂಡಹಳ್ಳಿ , ಪಣತ್ತೂರು, ರಾಮಗೊಂಡನಹಳ್ಳಿ, ಸಿದ್ದಾಪುರ, ಸೋರಹುಣಸೆ, ತುಬರಹಳ್ಳಿ, ವರ್ತೂರು, ಕಲ್ಕರೆ, ಹೋರಮಾವು. ಕೆ. ಚೆನ್ನಸಂದ್ರ, ವಾರಣಾಸಿ, ವಸಂತಪುರ, ಉಲ್ಲಾಳ ಸೋಣ್ಣೆನಹಳ್ಳಿ, ಗಾಣಾಕಲ್ಲು, ಹೆಮ್ಮಿಗೆಪುರ, ಸೋಮಪುರ, ವಾರಸಂದ್ರ,ಮನವರ್ತಕಾವಲು, ಲಿಂಗದೀರನಹಳ್ಳಿ, ಹೊಸಹಳ್ಳಿ, ಅರೇಹಳ್ಳಿ, ವಡ್ಡರಪಾಳ್ಯ ಉತ್ತರಹಳ್ಳಿ, ಸುಬ್ರಮಣ್ಯಪುರಗಳಲ್ಲಿ ನೀರಿನ ಪೂರೈಕೆಯಲ್ಲಿ ಅಡಚಣೆಯಾಗಿದೆ.

ಗುಬ್ಬಲಾಳ, ತುರಹಳ್ಳಿ, ಗಿಡದಕೋನೆನಹಳ್ಳಿ, ಆಲಹಳ್ಳಿ, ಅಂಬಲಿಪುರ, ಅಂಜನಾಪುರ, ಬಸಪುರ, ಬಸವನಪುರ, ಬೇಗೂರು, ಬೆಳ್ಳಂದೂರು, ಚಂದ್ರಶೇಖರಪುರ, ದೊಡ್ಡಕಲ್ಲಸಂದ್ರ, ಗೊಲ್ಲಹಳ್ಳಿ, ಗೊಟ್ಟಿಗೆರೆ, ಅರಳೂರು ಜುನಸಂದ್ರ, ಕೈಕೋಂಡನಹಳ್ಳಿ, ಕಾಳೇನಾ ಅಗ್ರಹಾರ, ಕಂಬತ್ತಹಳ್ಳಿ, ಕಮ್ಮನಹಳ್ಳಿ, ಕಸವನಹಳ್ಳಿ, ಕೂಡಲು, ಪರಪ್ಪನ ಅಗ್ರಹಾರ, ಪಿಳ್ಳಗಾನಹಳ್ಳಿ, ರಘುವನಹಳ್ಳಿ, ತಲಘಟ್ಟಪುರ, ತಿಪ್ಪಸಂದ್ರ, ವಾಜರಹಳ್ಳಿ, ಯಲೇನಹಳ್ಳಿ, ಭರತೇನ ಅಗ್ರಹಾರ, ಬೋಗನಹಳ್ಳಿ, ಚಿಕ್ಕಬೆಳ್ಳಂದೂರು, ಚಿಕ್ಕತೇಗೂರು, ದೊಡ್ಡಕನ್ನಹಳ್ಳಿ, ದೊಡ್ಡತೆಗೂರು, ನಾಗನಾತಪುರ, ಅಬ್ಬಿಗೇರೆ, ಚಿಕ್ಕಸಂದ್ರ, ಶೆಟ್ಟಹಳ್ಳಿ, ಕರಿಹೋಬನಹಳ್ಳಿ, ಅಂಧರಹಳ್ಳಿ, ಮ್ಯಾಡರಹಳ್ಳಿ, ದೊಡ್ಡಬಿದರಕಲ್ಲು, ಲಿಂಗಧೀರನಹಳ್ಳಿ ಬಿ, ಹೆರೋಹಳ್ಳಿ, ಹೊಸಹಳ್ಳಿಯಲ್ಲಿ ನೀರಿನ ವ್ಯತ್ಯಯ ಉಂಟಾಗಲಿದೆ.


Share this with Friends

Related Post