Mon. Dec 23rd, 2024

ಪಾಕಿಸ್ತಾನ ಪರ ಘೋಷಣೆ: ಕ್ರಮಕ್ಕೆ ಬಿ.ಎಂ ರಘು ಆಗ್ರಹ

Share this with Friends

ಬೆಂಗಳೂರು, ಫೆ.28: ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದವರನ್ನು ತಕ್ಷಣ ಬಂಧಿಸಬೇಕೆಂದು ಮೈಸೂರು ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಿ ಎಂ ರಘು ಆಗ್ರಹಿಸಿದ್ದಾರೆ.

ರಾಜ್ಯಸಭೆಗೆ ಕಾಂಗ್ರೆಸ್‌ನಿಂದ ಆಯ್ಕೆಯಾದ ಅಭ್ಯರ್ಥಿ ನಾಸಿರ್ ಹುಸೇನ ಬೆಂಬಲಿಗರು ವಿಜಯೋತ್ಸವದ ವೇಳೆ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದು, ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ.

ಪವಿತ್ರ ಮಣ್ಣಲ್ಲಿ ಹುಟ್ಟಿ ಇಲ್ಲಿಯ ನೀರು ಕುಡಿದು, ಇಲ್ಲಿ ಸಿಗುವ ಅನ್ನ, ಸಕಲ ಸರಕಾರಿ ಸೌಲಭ್ಯಗಳನ್ನು ಪಡೆಯುವ ಈ ಜನರು, ತಮ್ಮ ಪಾಕಿಸ್ತಾನ ಪ್ರೇಮವನ್ನು ಬಹಿರಂಗವಾಗಿ ತೋರಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಘೋಷಣೆಗಳನ್ನು ಕೂಗಿದ ದೇಶದ್ರೋಹಿಗಳನ್ನು ಮುಲಾಜಿಲ್ಲದೆ ಬಂಧಿಸಬೇಕು. ಅಲ್ಲದೆ, ವಿಧಾನಸೌಧ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಬಗ್ಗೆ ದೇಶದ್ರೋಹಿ ದೂರನ್ನು ಸ್ವಯಂ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ರಘು ಒತ್ತಾಯಿಸಿದ್ದಾರೆ.


Share this with Friends

Related Post