Thu. Dec 26th, 2024

ಫ್ರಿಡ್ಜ್‌ ನೊಳಗಿದ್ದ ಹೂಕೋಸಿನಲ್ಲಿ ಹಾವಿನಮರಿ!

Share this with Friends

ಉಡುಪಿ,ಜು.15: ಅಯ್ಯೋ ಇನ್ನು ಮುಂದೆ
ಫ್ರಿಡ್ಜ್‌ ನೊಳಗೆ‌ ತರಕಾರಿ ಇಡುವಾಗ ಹುಷಾರಾಗಿ‌ ನೋಡಿ ಇಡಿ.

ಏಕೆಂದರೆ ಹುಳ,ಹುಪ್ಪಟೆ,ಹಾವಿನಮರಿ ಹೀಗೆ ಏನೇನೊ ಇರುತ್ತವೆ ಹುಷಾರು!‌ ಇದಕ್ಕೆ ಇಲ್ಲೊಂದು ಅಪ್ಪಟ ಉದಾಹರಣೆ ಕೂಡಾ ಇದೆ.

ಫ್ರಿಡ್ಜ್‌ ನೊಳಗೆ ಇಟ್ಟಿದ್ದ ಹೂಕೋಸಿನೊಳಗೆ ಹಾವಿನ ಮರಿ ಪತ್ತೆಯಾದ ಆಘಾತಕಾರಿ ಘಟನೆ ಉಡುಪಿ ಜಿಲ್ಲೆ,ಕಾಪು ತಾಲೂಕು ಪಡುಬಿದ್ರೆಯ ಬೇಂಗ್ರೆಯಲ್ಲಿ ನಡೆದಿದೆ.

ಬೇಂಗ್ರೆಯ ಮಹಿಳೆಯೊಬ್ಬರು ಫ್ರಿಡ್ಜ್ ನಲ್ಲಿ ತರಕಾರಿ ಇಟ್ಟಿದ್ದರು,ಅದರಲ್ಲಿ ಹೂಕೋಸು ಕೂಡಾ ಇತ್ತು.ಮಹಿಳೆ ಅಡುಗೆ ಮಾಡಲು ಫ್ರಿಡ್ಜ್‌ ನಲ್ಲಿದ್ದ ತರಕಾರಿ ತೆಗೆದು ಕತ್ತರಿಸಲು ಮುಂದಾದರು.

ಆಗ ಅವರಿಗೆ ಶಾಕ್ ಕಾದಿತ್ತು, ಹೂಕೋಸಿನ ಒಳಭಾಗದಿಂದ ಹಾವಿನ ಮರಿ ಹೊರಗೆ ಬರುವುದನ್ನು ಕಂಡು ಮಹಿಳೆ ಹೌಹಾರಿದ್ದಾರೆ.

ಹೆದರಿ ಆಕೆ ಉರಗ ತಜ್ಞರಿಗೆ ಫೋನ್ ಮಾಡಿ ತಿಳಿಸಿದ್ದಾರೆ, ಸ್ಥಳಕ್ಕೆ ಬಂದ ಉರಗ ತಜ್ಞರು ಹಾವಿನ ಮರಿಯನ್ನು ಕಾಡಿಗೆ ಬಿಟ್ಟಿದ್ದಾರೆ.

ಹೂಕೋಸಿನಲ್ಲಿದ್ದುದು ಹೆಬ್ಬಾವಿನ ಮರಿ ಎಂದು ಉರಗ ತಜ್ಞರು ತಿಳಿಸಿದ್ದು,
ಮಳೆಗಾಲದಲ್ಲಿ ತರಕಾರಿಗಳನ್ನು ಬಳಸುವ ಸಂದರ್ಭದಲ್ಲಿ ಎಚ್ಚರಿಕೆ ವಹಿಸಬೇಕೆಂದು ಸಲಹೆ ನೀಡಿದ್ದಾರೆ.


Share this with Friends

Related Post