Wed. Dec 25th, 2024

ತಿಂಡಿ ತಿಂದ ಹಣ ಕೇಳಿದ್ದಕ್ಕೆ ಬೇಕರಿ ನೌಕರನಿಗೆ ಚಾಕು ಇರಿತ

Share this with Friends

ಮೈಸೂರು,ಜು.8: ತಿಂಡಿ ತಿಂದ ಹಣ ಕೇಳಿದ್ದಕ್ಕೇ ಪಾಪಿಗಳು‌‌ ಬೇಕರಿ ನೌಕರನಿಗೆ ಚಾಕುವಿನಿಂದ ಇರಿದಿರುವ ಹೇಯ ಘಟನೆ ಮೈಸೂರಿನಲ್ಲಿ ನಡೆದಿದೆ.

ಈ ಘಟನೆ ಹೂಟಗಳ್ಳಿ ಕಾಲೋನಿಯಲ್ಲಿ ನಡೆದಿದ್ದು,ಕೃಷ್ಣಾ ಬೇಕರಿಯಲ್ಲಿ ಕೆಲಸ ಮಾಡುವ ಮಹಮದ್ ಸಾಜಿದ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿದೆ.

ರೌಡಿಶೀಟರ್ ಪ್ರಜ್ವಲ್ ಆಲಿಯಾಸ್ ಸ್ಪಾಟ್ ಮತ್ತು ಸಂಜು ಹೀಗೆ ದಾಂಧಲೆ ನಡೆಸಿದ್ದು,ಸ್ವೆಟರ್ ಧರಿಸಿದ್ದರಿಂದ ಮಹಮದ್ ಸಾಜಿದ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಭಾನುವಾರ ರಾತ್ರಿ ಸುಮಾರು 10 ಗಂಟೆಯಲ್ಲಿ ಬೇಕರಿಗೆ ಬಂದ ಪ್ರಜ್ವಲ್ ಹಾಗೂ ಸಂಜು ಚಂಪಕಲಿ ಹಾಗೂ ಪಪ್ಸ್ ತಿಂದಿದ್ದಾರೆ.

ಹಣ ಕೇಳಿದಾಗ ಟ್ರೇಗಳನ್ನ ತಳ್ಳಿ ಪದಾರ್ಥಗಳನ್ನ ಬೀಳಿಸಿ ರೌಡಿಸಂ ಮಾಡಿ, ಸಾಜಿದ್ ನನ್ನು ಇರಿದಿದ್ದಾರೆ.
ನಂತರ ಸಾಜಿದ್ ಧರಿಸಿದ್ದ 30 ಗ್ರಾಂ ಚಿನ್ನದ ಸರ ಕಿತ್ತು ಇಬ್ಬರೂ ಪರಾರಿಯಾಗಿದ್ದಾರೆ.

ಈ‌‌ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಸಂಜು ನನ್ನು ಬಂಧಿಸಿರುವ ಪೊಲೀಸರು,ಪ್ರಜ್ವಲ್ ಬಂಧನಕ್ಕೆ ಬಲೆ ಬೀಸಿದ್ದಾರೆ.


Share this with Friends

Related Post