Tue. Dec 24th, 2024

ಕಾರ್ ಡೋರ್ ತಗುಲಿ ಕೆಳಗೆ ಬಿದ್ದ ಯುವಕನ ಮೇಲೆ ಹರಿದ ಬಸ್:ಶೋಭಾ ಪ್ರಚಾರದ ವೇಳೆ ಅವಘಡ

Share this with Friends

ಬೆಂಗಳೂರು,ಏ.8: ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಕಾರಿನ ಡೋರ್ ತಗುಲಿ ಕೆಳಗೆ ಬಿದ್ದ ಸವಾರನ‌ ಮೇಲೆ‌ ಬಸ್ ಹರಿದು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕೆ.ಆರ್.ಪುರದಲ್ಲಿ ನಡೆದಿದೆ.

ಪ್ರಕಾಶ್(35) ಮೃತಪಟ್ಟ ಯುವಕ, ಸೋಮವಾರ ಬೆಳಗ್ಗೆ ಕೆ.ಆರ್.ಪುರ ಕ್ಷೇತ್ರಕ್ಕೆ ಶೋಭಾ ಕರಂದ್ಲಾಜೆ ಪ್ರಚಾರಕ್ಕಾಗಿ ಆಗಮಿಸಿದ್ದರು,ಆಗ‌ ಕಾರಿನ ಚಾಲಕ ಸಮೀಪದ ದೇವಸ್ಥಾನದ ಬಳಿ ಕಾರು ನಿಲ್ಲಿಸಿದ್ದ.

ಕಾರಿನ ಬಾಗಿಲನ್ನು ಸರಿಯಾಗಿ ಗಮನಿಸದೇ ಹಿಂದಿನಿಂದ ಬಂದ ಬೈಕ್ ಕಾರಿನ ಡೋರ್ ಗೆ ಡಿಕ್ಕಿ ಹೊಡೆದು ಸವಾರ ಕೆಳಗೆ ಬಿದ್ದಿದ್ದಾನೆ,ಅದೇ ವೇಳೆ ಅವರ ಮೇಲೆ ಬಸ್ ಹರಿದಿದೆ., ತಕ್ಷಣ ಆವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಅಭ್ಯರ್ಥಿ ಶೋಭಾ ಕರಾಂದ್ಲಾಜೆ, ನಮ್ಮ ಕಾರ್ಯಕರ್ತ ಪ್ರಕಾಶ್ ಗೆ ಅಪಘಾತವಾಗಿದೆ. ನಾವು ಮುಂದೆ ಹೋಗಿದ್ದೆವು. ರಸ್ತೆ ಬದಿ ನಿಂತಿದ್ದ ಕಾರಿನ ಡೋರ್ ಓಪನ್ ಆದಾಗ ಬೈಕ್ ಬಂದು ಡಿಕ್ಕಿ ಹೊಡೆದಿದೆ,ಪ್ರಕಾಶ್ ಮೃತಪಟ್ಟಿದ್ದು,ನಮಗೆಲ್ಲರಿಗೂ ದುಃಖ ಆಗಿದೆ, ಪ್ರಕಾಶ್ ನಿಷ್ಟಾವಂತ ಕಾರ್ಯಕರ್ತ ಎಂದು ತಿಳಿಸಿದ್ದಾರೆ.


Share this with Friends

Related Post