Mon. Dec 23rd, 2024

ಖ್ಯಾತ ನಟ ಅಲ್ಲು ಅರ್ಜುನ್ ವಿರುದ್ಧ ಕೇಸು ದಾಖಲು

Share this with Friends

ಆಂದ್ರ,ಮೇ.12: ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಕ್ಕಾಗಿ ಟಾಲಿವುಡ್ ನಟ ಅಲ್ಲು ಅರ್ಜುನ್ ಮತ್ತು ಜಗನ್ ರೆಡ್ಡಿ ಪಕ್ಷದ ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.

ನಟ ಅಲ್ಲು ಅರ್ಜುನ್ ಮತ್ತು ವೈಎಸ್‌ಆರ್‌ಸಿಪಿ ಶಾಸಕ ರವಿಚಂದ್ರ ಕಿಶೋರ್ ರೆಡ್ಡಿ ಅವರ ನಿವಾಸದಲ್ಲಿ ಜನಸಂದಣಿಗೆ ಅವಕಾಶ ಮಾಡಿಕೊಟ್ಟಿದ್ದಕ್ಕಾಗಿ ಮತ್ತು ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಹಾಗಾಗಿ ಅವರಿಗೆ ಸಂಕಷ್ಟ ಎದುರಾಗಿದೆ.

ಆಂಧ್ರಪ್ರದೇಶದ ನಂದ್ಯಾಲ್ ಪೊಲೀಸರು ನಟ ಅಲ್ಲು ಅರ್ಜುನ್ ವಿರುದ್ಧ ಅವ್ರು ತಮ್ಮ ಸ್ನೇಹಿತ ಮತ್ತು ವೈಎಸ್ಆರ್ ಸಿಪಿ ಶಾಸಕಿ ಶಿಲ್ಪಾ ರವಿ ಅವರ ಮನೆಗೆ ಭೇಟಿ ನೀಡಿದ್ದಕ್ಕಾಗಿ ಪ್ರಕರಣ ದಾಖಲಿಸಿದ್ದಾರೆ.

ಆಂಧ್ರಪ್ರದೇಶದ 25 ಲೋಕಸಭಾ ಸ್ಥಾನಗಳ ಜೊತೆಗೆ ಮೇ 13 ರಂದು ರಾಜ್ಯದಲ್ಲಿ ಚುನಾವಣೆ ನಡೆಯಲಿದ್ದು, ಶಿಲ್ಪಾ ರವಿ ನಂದ್ಯಾಲ್ ನಿಂದ ಮರು‌ ಆಯ್ಕೆ ಬಯಸಿದ್ದಾರೆ.

ಕ್ಷೇತ್ರದ ಚುನಾವಣಾಧಿಕಾರಿಯಿಂದ ಪೂರ್ವಾನುಮತಿ ಪಡೆಯದೆ ‘ಪುಷ್ಪ’ ಅಭಿಮಾನಿ ನಟ ಶಾಸಕರ ಮನೆಗೆ ಭೇಟಿ ನೀಡಿದ್ದರಿಂದ, ಅವರ ವಿರುದ್ಧ ಮತ್ತು ವೈಎಸ್ಆರ್ ಸಿಪಿ ಅಭ್ಯರ್ಥಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಪ್ರಚಾರದ ಕೊನೆಯ ದಿನದಂದು ಅಲ್ಲು ಅರ್ಜುನ್ ಶಾಸಕರ ಮನೆಗೆ ಭೇಟಿ ನೀಡಿ ತಮ್ಮ ಬೆಂಬಲವನ್ನು ತೋರಿಸಿದರು. ಅವರ ಭೇಟಿಯ ಬಗ್ಗೆ ತಿಳಿದ ನಂತರ, ಅವರ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯ ದರ್ಶನ ಪಡೆಯಲು ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.

ಪತ್ನಿ ಸ್ನೇಹಾ ರೆಡ್ಡಿ, ಶಿಲ್ಪಾ ರವಿ ಮತ್ತು ಶಾಸಕರ ಕುಟುಂಬ ಸದಸ್ಯರೊಂದಿಗೆ ಬಾಲ್ಕನಿಯಲ್ಲಿ ಕಾಣಿಸಿಕೊಂಡ ನಟ ‘ಪುಷ್ಪಾ, ಪುಷ್ಪಾ’ ಎಂದು ಘೋಷಣೆ ಕೂಗುತ್ತಿದ್ದ ಬೃಹತ್ ಜನರತ್ತ ಕೈ ಬೀಸಿದ್ದರು.


Share this with Friends

Related Post