Wed. Jan 1st, 2025

ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿಸಿದ ಕ್ರೂರಿ ತಾಯಿ

Share this with Friends

ನವದೆಹಲಿ,ಏ.12: ತಾಯೀನೆ ದೇವರೆಂದು ನಾವೆಲ್ಲಾ ಪೂಜಿಸುತ್ತೇವೆ ಆದರೆ ಇಲ್ಲೊಬ್ಬಳು ಕ್ರೂರ ತಾಯಿ ತಾನು ಹೆತ್ತ ಮಗಳನ್ನೇ ಅತ್ಯಾಚಾರ ಮಾಡಿಸಿದ ಅತ್ಯಂತ ಅಮಾನವೀಯ ಘಟನೆ ವರದಿಯಾಗಿದೆ.

ತಾಯಿಯೊಬ್ಬಳು ಏನೂ ಅರಿಯದ 10 ವರ್ಷದ ಮಗಳನ್ನು ತನ್ನ ಸ್ನೇಹಿತನಿಂದಲೇ ಅತ್ಯಾಚಾರ ಮಾಡಿಸಿ, ವೇಶ್ಯಾವಾಟಿಕೆಗೆ ತಳ್ಳಲು ಯತ್ನಿಸಿದ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.

ಲೈಂಗಿಕ ದೌರ್ಜನ್ಯವನ್ನು ಸಹಿಸಲಾಗದೇ ಬಾಲಕಿ ಜನವರಿ 20ರಂದು ಮನೆ‌ ಬಿಟ್ಟು ದೆಹಲಿಯ ಬೀದಿಗಳಲ್ಲಿ ಸುತ್ತಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ಬಾಲಕಿ ಮನೆಯಿಂದ ಹೋದ ನಂತರ ತಾಯಿಯ ಸ್ನೇಹಿತ‌ ಬಾಲಕಿಯ 13 ವರ್ಷ ವಯಸ್ಸಿನ ಸಹೋದರನ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಆರಂಭಿಸಿದ್ದ ಹಾಗಾಗಿ ಆತನೂ ಮನೆ ತೊರೆದು ಹೋಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ದೆಹಲಿಯ ಬೀದಿಯಲ್ಲಿ ತಿರುಗಾಡುತ್ತಿದ್ದ ಬಾಲಕಿಯನ್ನು ಸ್ಥಳೀಯರು ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಈಗ ಮಕ್ಕಳ ಕಲ್ಯಾಣ ಸಮಿತಿಯ ಆರೈಕೆಗೆ ಬಾಲಕಿಯನ್ನು ಒಪ್ಪಿಸಲಾಗಿದೆ.

ಬಾಲಕಿಯ ತಂದೆ 4 ವರ್ಷಗಳ ಹಿಂದೆ ಸಾವನ್ನಪ್ಪಿದ್ದು ನಂತರ ಮಕ್ಕಳು ತನ್ನ ತಾಯಿಯ ಜೊತೆಗೆ ಅಜ್ಜಿಯ ಮನೆಯಲ್ಲಿ ವಾಸಿಸುತ್ತಿದ್ದರು.

ಕಳೆದ ವರ್ಷ ಇಬ್ಬರು ಮಕ್ಕಳನ್ನು ಗಾಜಿಯಾಬಾದ್ ನಲ್ಲಿರುವ ತನ್ನ ತವರು ಮನೆಗೆ ತಾಯಿ ಕರೆದೊಯ್ದಿದ್ದಳು. ಅಲ್ಲಿ ಆಕೆಯ ಸ್ನೇಹಿತ ಬಾಲಕಿಯ ಮೇಲೆ ಪದೇ ಪದೇ ಅತ್ಯಾಚಾರ ನಡೆಸಿದ್ದ ಅಲ್ಲದೆ ಆಕೆಯ 13 ವರ್ಷದ ಸಹೋದರನ ಮೇಲೆ ಕೂಡ ಲೈಂಗಿಕ ದೌರ್ಜನ್ಯ ನಡೆಸುತ್ತಿದ್ದ.

ಪತಿಯ ಮರಣದ ನಂತರ ಬಾಲಕಿಯ ತಾಯಿ ವೇಶ್ಯಾವಾಟಿಕೆಯಲ್ಲಿ ತೊಡಗಿಸಿಕೊಂಡಿದ್ದಳು ಮತ್ತು ತನಗೆ ವಯಸ್ಸಾದ ಬಳಿಕ ತನ್ನ ಮಗಳನ್ನು ವ್ಯಾಪಾರಕ್ಕೆ ತಳ್ಳಲು ಮುಂದಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತಾಯಿ ಹಾಗೂ ಆಕೆಯ ಸ್ನೇಹಿತ ರಾಜನನ್ನು ಬಂಧಿಸಲಾಗಿದೆ ಎಂದು ಗಾಜಿಯಾಬಾದ್ ನ ಲೋನಿ ಬಾರ್ಡರ್ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.

ಬಾಲಕಿ ನಾಪತ್ತೆಯಾದ ಬಳಿಕವೂ ತಾಯಿ ಪೊಲೀಸರಿಗೆ ದೂರು ನೀಡಿರಲಿಲ್ಲ, ಆರೋಪಿ ರಾಜು ಬಾಲಕಿಯ ತಾಯಿಯನ್ನು ಬೆದರಿಸಿ ಘಟನೆಯನ್ನು ಯಾರಿಗೂ ಹೇಳಬಾರದೆಂದು ಬಾಲಕಿ ನಾಪತ್ತೆಯಾದ ಬಗ್ಗೆಯೂ ಹೇಳದಂತೆ ಬೆದರಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.

ಘಟನೆಯ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಕಮಿಷನರ್ ಭಾಸ್ಕರ್ ಶರ್ಮಾ, ಬಾಲಕಿ ತನ್ನ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ರಾಜು ಎಂದು ಗುರುತಿಸಿದ್ದಾಳೆ. ಬಾಲಕಿ ನಾಪತ್ತೆಯಾದ ಬಳಿಕವೂ ತಾಯಿ ಪೊಲೀಸರಿಗೆ ದೂರು ನೀಡಿರಲಿಲ್ಲ. ಆರೋಪಿ ರಾಜು ಬಾಲಕಿಯ ತಾಯಿಯನ್ನು ಬೆದರಿಸಿ ಅಪರಾಧವನ್ನು ಮುಚ್ಚಿ ಹಾಕಲು ಹಿಂಸಿಸುತ್ತಿದ್ದನು. ಬಾಲಕಿ ನಾಪತ್ತೆಯಾದ ಬಗ್ಗೆ ಯಾರ ಬಳಿಯೂ ಹೇಳದಂತೆ ಬೆದರಿಸಿದ್ದನು ಎಂದು ತಿಳಿಸಿದ್ದಾರೆ.


Share this with Friends

Related Post