Tue. Dec 24th, 2024

ಮಗಳಿಗಾಗಿ ಇಬ್ಬರು ಸೋದರರನ್ನು ಕೊಂದ ಅಪ್ಪ

Share this with Friends

ಬೆಳಗಾವಿ,ಮೇ.8: ಅಪ್ರಾಪ್ತ ಮಗಳನ್ನು ಮದುವೆ ಮಾಡು ವಂತೆ ಪೀಡಿಸುತ್ತಿದ್ದ ಯುವಕ, ಆತನ ರಕ್ಷಣೆಗೆ ಬಂದ ಸಹೋದರನನ್ನು ಬಾಲಕಿಯ ತಂದೆ ಕೊಂದಿರುವ‌‌ ಹೇಯ ಘಟನೆ ಜಿಲ್ಲೆಯಲ್ಲಿ ನಡೆದಿದೆ.

ಈ ದುರ್ಘಟನೆ ಬೆಳಗಾವಿ ಜಿಲ್ಲೆ,
ಮುರಗೋಡು ಪೊಲೀಸ್ ಠಾಣಾ ವ್ಯಾಪ್ತಿಯ ಸೊಗಲು ರಸ್ತೆಯಲ್ಲಿರುವ ದೊಣ್ಣನಕೊಪ್ಪ ಗ್ರಾಮದಲ್ಲಿ ನಡೆದಿದ್ದು ಪಕೀರಪ್ಪ ಕೊಲೆ ಮಾಡಿದ ಆರೋಪಿ.

ಬಾಲಕಿಯ ತಂದೆ ಚಾಕುವಿನಿಂದ ಹಲ್ಲೆ ನಡೆಸಿದ್ದು,ಮಾಯಪ್ಪ (20)ಸ್ಥಳದಲ್ಲಿ ‌ಮೃತಪಟ್ಟರೆ,ಆತನನ್ನು ರಕ್ಷಿಸಲು ಧಾವಿಸಿದ ಸಹೋದರ ಯಲ್ಲಪ್ಪ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮುರಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಫಕೀರಪ್ಪನನ್ನು ಪೊಲೀಸರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಫಕೀರಪ್ಪನ ಅಪ್ರಾಪ್ತ ಮಗಳನ್ನು ಮದುವೆಯಾಗುತ್ತೇನೆಂದು ಮಾಯಪ್ಪ ಸದಾ ಪೀಡಿಸುತ್ತಿದ್ದ,ಜತೆಗೆ ಮನೆ ಬಳಿ ಬಂದು ಗಲಾಟೆ ಮಾಡುತ್ತಿದ್ದ, ಆತನಿಗೆ ಫಕೀರಪ್ಪ ಹಾಗೂ ಮನೆಯವರು ಸಾಕಷ್ಟು ಬಾರಿ ಬುದ್ಧಿ ಹೇಳಿದರೂ ಆತ ಪೀಡಿಸುವುದನ್ನು ಬಿಟ್ಟಿರಲಿಲ್ಲ,ಈತನ ಕಾಟದಿಂದ ಬೇಸತ್ತ ಫಕೀರಪ್ಪ ಮಾಯಪ್ಪನನ್ನು ಚಾಕುವಿನಿಂದ ಇರುದು ಹತ್ಯೆ ಮಾಡಿದ್ದಾನೆ.

ಈ ವೇಳೆ ಮಾಯಪ್ಪನನ್ನು ರಕ್ಷಿಸಲು ಬಂದ ಆತನ ಸಹೋದರ ಯಲ್ಲಪ್ಪನ ಮೇಲೂ ಹಲ್ಲೆ ನಡೆಸಿದ್ದು,ಗಂಭೀರವಾಗಿ ಗಾಯಗೊಂಡಿದ್ದ ಆತ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಒಟ್ಟಾರೆ ಈ ಘಟನೆಯಿಂದ ಎರಡು ಕುಟುಂಬಗಳು ಬೀದಿಗೆ ಬಿದ್ದಂತಾಗಿದೆ.


Share this with Friends

Related Post