Mon. Dec 23rd, 2024

ಕುಟುಂಬದ ಐವರನ್ನು ಕೊಂದು ವ್ಯಕ್ತಿ ‌ಆತ್ಮಹತ್ಯೆ

Share this with Friends

ಲಕ್ನೊ,ಮೇ.11: ವ್ಯಕ್ತಿಯೊಬ್ಬ
ತನ್ನದೇ ಕುಟುಂಬದ ಐದು ಸದಸ್ಯರನ್ನು ಹತ್ಯೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ಘೋರ ಘಟನೆ ಉತ್ತರ ಪ್ರದೇಶದ ಸೀತಾಪುರದಲ್ಲಿ ನಡೆದಿದೆ

ಸೀತಾಪುರದ ಪಾಲಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು,ಹತ್ಯೆ ಮಾಡಿದ ವ್ಯಕ್ತಿ ಅನುರಾಗ್‌ ಠಾಕೂರ್(42) ಮಾನಸಿಕ ಅಸ್ವಸ್ಥ ಎಂದು ಪೊಲೀಸರು ತಿಳಿಸಿದ್ದಾರೆ.

ವ್ಯಕ್ತಿಯು ತನ್ನ ತಾಯಿಯನ್ನು ಮೊದಲು ಗುಂಡಿಕ್ಕಿ ಕೊಂದು, ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.
ನಂತರ ಅವನು ತನ್ನ ಮೂವರು ಮಕ್ಕಳನ್ನು ಮನೆಯ ಛಾವಣಿಯಿಂದ ಎಸೆದಿದ್ದಾನೆ ಇದರಿಂದ ಮಕ್ಕಳು ಮೃತಪಟ್ಟಿವೆ.

ಸಾವಿತ್ರಿ(65)ತಾಯಿ,ಪತ್ನಿ ಪ್ರಿಯಾಂಕ(40), ಮಕ್ಕಳಾದ ಅಶ್ವಿನಿ(12),ಅಶ್ವಿ (10),ಅದ್ವೈತ (6)ಅವರನ್ನು ಕೊಂದು ನಂತರ ತಾನೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದಾನೆ

ತನ್ನ ಕುಟುಂಬದ ಐದು ಸದಸ್ಯರನ್ನು ಕೊಂದು ನಂತರ ಅವನು ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಆರೋಪಿ ಅನುರಾಗ್ ಠಾಕೂರ್
ಮದ್ಯವ್ಯಸನಿಯಾಗಿದ್ದು, ಮಾನಸಿಕವಾಗಿ ತೊಂದರೆಗೀಡಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಮತ್ತು ಎಫ್ಎಸ್ಎಲ್ ತಂಡ ತನಿಖೆ ನಡೆಸುತ್ತಿದೆ ಎಂದು ಸೀತಾಪುರ ಎಸ್ಪಿ ಚಕ್ರೇಶ್ ಮಿಶ್ರಾ ಹೇಳಿದ್ದಾರೆ.


Share this with Friends

Related Post