Fri. Apr 4th, 2025

ಅಖಂಡ ಹಿಂದೂ ರಾಷ್ಟ್ರ ಸಂಕಲ್ಪಕ್ಕಾಗಿ ಬೃಹತ್ ಮೆರವಣಿಗೆ

Share this with Friends

ಶ್ರೀರಂಗಪಟ್ಟಣ, ಆ.15: ಹರಿದು ಹಂಚಿ ಹೋಗಿರುವ ಭಾರತದ ಭೂಮಿ ಮತ್ತೆ ಒಂದಾಗಬೇಕು ಎಂಬ ಧ್ಯೇಯ ವಾಕ್ಯದೊಂದಿಗೆ ವಿಶ್ವ ಹಿಂದೂ ಪರಿಷತ್‌, ಭಜರಂಗದಳದವರು ಆ .14ರಂದು ಬಿಟ್ಟಂಗಾಲದಲ್ಲಿ ಅಖಂಡ ಭಾರತ ಸಂಕಲ್ಪ ದಿನ ಆಚರಿಸಿದರು.

ಶ್ರೀರಂಗಪಟ್ಟಣದ ಕುವೆಂಪು ವೃತ್ತದಿಂದ ಪೇಟೆ ಬೀದಿ ಮಾರ್ಗವಾಗಿ ಅಖಂಡ ಹಿಂದೂ ರಾಷ್ಟ್ರ ಸಂಕಲ್ಪನೆಗಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ, ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಂಜುಗಳನ್ನು‌ ಹಿಡಿದು ಮೆರವಣಿಗೆ ಮಾಡಿ ಸಾರ್ವಜನಿಕರ ಗಮನ ಸೆಳೆದರು.

ನಂತರ ಪೇಟೆ ನಾರಾಯಣಸ್ವಾಮಿ ದೇವಸ್ಥಾನದ ಮುಂಭಾಗ ತಾಯಿ ಭಾರತಾಂಬೆಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು

ಇದೆಲ್ಕದರ ನೇತೃತ್ವ ವನ್ನು ಶ್ರೀರಂಗಪಟ್ಟಣ ಕ್ಷೇತ್ರದ ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷರುಮತ್ತು ಆರ್ ಎಸ್ ಎಸ್ ಕಾರ್ಯಕರ್ತರು ಹೋಹಿಸಿದ್ದರು.


Share this with Friends

Related Post