ಮೈಸೂರು, ಮಾ.18: ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪುನೀತ್ ರಾಜಕುಮಾರ್ ಜನ್ಮದಿನೋತ್ಸವವನ್ನು ಮೈಸೂರಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತ
ಅಪ್ಪು ನೆನಪಿಗಾಗಿ ಶ್ರೀರಾಮ ಗೆಳಯರ ಬಳಗದ ವತಿಯಿಂದ ರಾಮಾನುಜ ರಸ್ತೆಯಲ್ಲಿರುವ ಅಕ್ಕಮಣ್ಣಿ ಉದ್ಯಾನವನದಲ್ಲಿ ಗಿಡ ನೆಟ್ಟು ನೀರು ಹಾಕಿ ಪೋಶಿಸಲಾಗುತ್ತಿದೆ.
ಈ ವೇಳೆ ಶ್ರೀರಾಮ ಗೆಳೆಯರ ಬಳಗದ ಅಧ್ಯಕ್ಷ ಸಿ ಸಂದೀಪ್ ಮಾತನಾಡಿ ಪುನೀತ್ ರಾಜಕುಮಾರ್ ರವರು ಮಾಡಿರುವ ಸೇವಾ ಕಾರ್ಯವು ಪ್ರತಿಯೊಬ್ಬರಿಗೂ ಪ್ರೇರಣೆಯಾಗಲೆಂದು ಸ್ಪೂರ್ತಿ ದಿನವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಜನಸಾಮಾನ್ಯರು ಅಪ್ಪು ಮಾಡಿರುವ ಸೇವಾ ಕಾರ್ಯವನ್ನು ಸ್ಪೂರ್ತಿಯಾಗಿ ತೆಗೆದುಕೊಂಡು ಸಾರ್ವಕಜನಿಕ ಜೀವನದಲ್ಲಿ ಸೇವಾಮನೋಭಾವದ ದೃಷ್ಠಿಯಲ್ಲಿ ಆರೋಗ್ಯ ಶಿಬಿರ, ರಕ್ತದಾನ, ನೇತ್ರದಾನ, ಸಾಮೂಹಿಕ ವಿವಾಹ ಸೇರಿದಂತೆ ಸಾಂಸ್ಕೃತಿಕ, ಧಾರ್ಮಿಕ, ಕ್ರೀಡಾ ಅನ್ನ ದಾಸೋಹ ಕಾರ್ಯಕ್ರಮಗಳನ್ನ ಆಯೋಜಿಸುತ್ತಾ ಬಂದಿದ್ದಾರೆ ಪರಿಸರ ಕಾಳಜಿ ಮತ್ತು ಕನ್ನಡ ಭಾಷೆಗಾಗಿ ಅವರ ಸೇವೆ ಅವಿಸ್ಮರಣೀಯ ಎಂದು ಹೇಳಿದರು.
ಶ್ರೀರಾಮ ಗೆಳಯರ ಬಳಗದ ಧರ್ಮೇಂದ್ರ, ಬಸವರಾಜು, ರಾಕೇಶ್, ಪ್ರೇಮ್, ಶ್ರೀಧರ್, ಭಾಸ್ಕರ್, ವರುಣ್, ನಾರಾಯಣ್, ಗಿರೀಶ್, ಕಿರಣ್, ಧನುಷ್, ಕುಶಾಲ್, ಧನುಷ್, ವಿನಯ್ ಸಾಗರ್, ಮಧುಸೂಧನ್, ಭಾನುಪ್ರಕಾಶ್, ಪವನ್, ಪ್ರಸಾದ್, ಅಭಿನವ್, ಸಂತೋಷ್, ಗುರು, ಲಿಖಿತ್ ಮತ್ತಿತರರು ಪಾಲ್ಗೊಂಡಿದ್ದರು.