ಮೈಸೂರು, ಏ.30: ಕ್ಷುಲಕ ವಿಷಯಕ್ಕೆ ಗುಂಪೊಂದು ಯುವಕನನ್ನು ಮಾರಕಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ಕೆಆರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ರಾಮಾನುಜ ರಸ್ತೆ ವಾಸಿ ಕುಮಾರ್ (28) ಕೊಲೆಯಾದ ದುರ್ದೈವಿ.
ಕುಮಾರ್ ನನ್ನು ರಾಮಾನುಜ ರಸ್ತೆಯಲ್ಲಿ ನಾಲ್ಕೈದು ಮಂದಿ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದರು.
ಕುಮಾರವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಮೃತಪಟ್ಟಿದ್ದಾನೆ
ಕುಮಾರ್ ಮೈಸೂರಿನ ಎಪಿಎಂಸಿಯಲ್ಲಿ ಈರುಳ್ಳಿ ವ್ಯಾಪಾರ ಮಾಡುತ್ತಿದ್ದರು. ಈ ಹಿಂದೆ ಕ್ಷುಲ್ಲಕ ವಿಷಯಕ್ಕೆ ಕೊಲೆ ಮಾಡಿದ ಆರೋಪಿಗಳೊಂದಿಗೆ ಗಲಾಟೆ ಆಗಿತ್ತೆಂದೂ ಅದೇ ವಿಷಯವಾಗಿ ನಿನ್ನೆ ರಾತ್ರಿ ಮತ್ತೆ ಆರೋಪಿಗಳು ಈತನೊಂದಿಗೆ ಜಗಳ ತೆಗೆದು ಹಲ್ಲೆ ನಡೆಸಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
ಕೆಆರ್ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು.ಈ ಬಗ್ಗೆ ಪ್ರಕರಣ ದಾಖಲಿಸಿ ಕೊಂಡು ಆರೋಪಿಗಳನ್ನು ಬಂಧಿಸಲು ಬಲೆ ಬೀಸಿದ್ದಾರೆ.