Wed. Dec 25th, 2024

ಆತ್ಮಹತ್ಯೆ ಡ್ರಾಮಾ ಮಾಡಲು ಹೋಗಿ ನಿಜವಾಗಿ ಮೃತಪಟ್ಟ ವ್ಯಕ್ತಿ

Share this with Friends

ಬೆಂಗಳೂರು, ಮೇ.16: ಪತ್ನಿಯನ್ನು ಹೆದರಿಸಲೆಂದು ಆತ್ಮಹತ್ಯೆ ಡ್ರಾಮಾ ಮಾಡಲು ಹೋಗಿ ಪತಿ ನಿಜವಾಗಿ ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ನಿಜವಾಗಿಯೂ ನೇಣಿನ ಕುಣಿಕೆ ಬಿಗಿದು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಬಾಗಲಗುಂಟೆಯಲ್ಲಿ ನಡೆದಿದೆ.

ಅಮಿತ್ ಕುಮಾರ್ (28) ಮೃತ ದುರ್ದೈವಿಯಾಗಿದ್ದು, ಬಿಹಾರ ಮೂಲದ ಆತ ಜಿಮ್ ಟ್ರೇನರ್ ಆಗಿದ್ದರು.

ಬಿಹಾರದಿಂದ ಕೆಲಸ ಹುಡುಕಿ 10 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದು ನೆಲೆಸಿದ್ದರು, ಯುವತಿಯೊಬ್ಬಳನ್ನು ಪ್ರೀತಿಸಿ ವರ್ಷದ ಹಿಂದೆ ಅಮಿತ್ ವಿವಾಹವಾಗಿದ್ದ.

ವಿವಾಹಕ್ಕೆ ಮನೆಯವರ ವಿರೋಧವಿತ್ತು,ಪತ್ನಿ ನರ್ಸಿಂಗ್ ಕೋರ್ಸ್ ಸೇರಿಕೊಂಡಿದ್ದಳು. ಓದು ಹಾಗೂ ಕೆಲಸದ ಒತ್ತಡದಲ್ಲಿ ಪತಿಯ ಕಡೆ ಗಮನ ಕೊಡುತ್ತಿರಲಿಲ್ಲ. ಇದರಿಂದಾಗಿ ಪತಿ-ಪತ್ನಿ ನಡುವೆ ಜಗಳವಾಗುತ್ತಿತ್ತು,ಹಾಗಾಗಿ ಬೇಸರಗೊಂಡು ಪತ್ನಿ ತವರಿಗೆ ಹೋಗಿದ್ದಳು.

ಪತ್ನಿ ಮನವೊಲಿಸಲು ಅಮಿತ್ ಕುಮಾರ್ ಯತ್ನಿಸಿದ್ದರೂ ಪ್ರಯೋಜನವಾಗಿರಲಿಲ್ಲ, ಕೊನೆಗೆ ವಿಡಿಯೋ ಕಾಲ್ ಮಾಡಿ ತಾನು ನೇಣು ಬಿಗಿದುಕೊಳ್ಳುತ್ತೇನೆ ಎಂದು ಪತ್ನಿ ಬೆದರಿಸಲು ನೇಣು ಬಿಗಿದುಕೊಂಡವನಂತೆ ಡ್ರಾಮ ಮಾಡಿದ್ದ,ಆದರೆ ದುರ್ದೈವ ಡ್ರಾಮ ಮಾಡಲು ಹೋಗಿ ನಿಜವಾಗಿಯೂ ನೇಣಿನ ಹಗ್ಗ ಕತ್ತಿಗೆಗೆ ಬಿಗಿದು ಅಮಿತ್ ಕುಮಾರ್ ಮೃತಪಟ್ಟಿದ್ದಾನೆ.

ಬಾಗಲಗುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post