Mon. Dec 23rd, 2024

ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿದ ಪಾದ್ರಿ

Share this with Friends

ವಿಟ್ಲ,ಮಾ.2: ಸಾರ್ವಜನಿಕರಿಗೆ‌ ಆಶೀರ್ವಾದ ನೀಡಿ ಒಳ್ಳೆಯದನ್ನು ಬಯಸಬೇಕಿದ್ದ ಪಾದ್ರಿಯೊಬ್ಬರು ವೃದ್ಧ ದಂಪತಿ ಮೇಲೆ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪುಣಚ ಗ್ರಾಮದ ಪರಿಯಾಲ್ತಡ್ಕದಲ್ಲಿ ಈ ಹೇಯ‌ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಮನೇಲ ಪರಿಯಲ್ತಡ್ಕ ಕ್ರೈಸ್ಟ್ ಕಿಂಗ್ ಪ್ಯಾರಿಷ್ ನ ಪಾದ್ರಿಯೊಬ್ಬರು ಹಲ್ಲೆ ನಡೆಸಿದ್ದು ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಫೆ.29ರಂದು ಈ ಘಟನೆ ನಡೆದಿದೆ, ಪಾದ್ರಿಯವರ ಬಳಿ‌ ವೃದ್ದ ದಂಪತಿ ಹೋಗಿದ್ದ ವೇಳೆ ಯಾವುದೋ ವಿಚಾರಕ್ಕೆ ನಡುವೆ ವಾಗ್ವಾದ ನಡೆದಿದೆ,ಆಗ ತಾಳ್ಮೆ ಕಳೆದುಕೊಂಡ ಪಾದ್ರಿ ವೃದ್ಧ ದಂಪತಿಗೆ ಹಲ್ಲೆ ನಡೆಸಿದ್ದಾರೆ‌.

ಹಲ್ಲೆಗೊಳಗಾದ ದಂಪತಿ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಲಾಗುತ್ತಿದೆ.


Share this with Friends

Related Post