Mon. Dec 23rd, 2024

ಇಡಬ್ಲ್ಯುಎಸ್‌ ಸರ್ಟಿಫಿಕೇಟ್ ವಾಯಿದೆ ಮಾನದಂಡ ಸರಿಪಡಿಸಲು ಸಚಿವರಿಗೆ ಮನವಿ

Share this with Friends

ಮೈಸೂರು,ಫೆ.6: ಮೈಸೂರಿಗೆ ಆಗಮಿಸಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರನ್ನ ಮೈಸೂರು ಬ್ರಾಹ್ಮಣ ಸಂಘದ ಪದಾಧಿಕಾರಿಗಳು ಭೇಟಿ ಮಾಡಿದರು.

ಈ‌ ವೇಳೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಆಡಳಿತಾತ್ಮವಾಗಿ ಸಕ್ರಿಯಗೊಳಿಸಬೇಕು ಮತ್ತು‌ ಇಡಬ್ಲ್ಯುಎಸ್ (EWS) ಸರ್ಟಿಫಿಕೇಟ್ ವಾಯಿದೆ ಮಾನದಂಡವನ್ನ ಸರಿಪಡಿಸಬೇಕೆಂದು ಮನವಿ ಮಾಡಿದರು.

ಇದೇ ಸಂಧರ್ಭದಲ್ಲಿ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ಸಮುದಾಯದ ಶ್ರೇಯೋಭಿವೃದ್ದಿಗಾಗಿ ರಾಜ್ಯ ಸರ್ಕಾರ ಸ್ಥಾಪಿಸಿರುವ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಶೈಕ್ಷಣಿಕ ಉದ್ಯೋಗ ಕ್ಷೇತ್ರದಲ್ಲಿ ನೆರವಾಗಲು ಸಕ್ರಿಯವಾಗಿ ಆಡಳಿತ ಮಂಡಳಿ ರಚಿಸಲು ರಾಜ್ಯ ಸರ್ಕಾರ ಮುಂದಾಗಬೇಕಿದೆ ಎಂದು ಹೇಳಿದರು.

ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣ ವಿದ್ಯಾರ್ಥಿಗಳ ಇಡಬ್ಲ್ಯುಎಸ್‌ ಸರ್ಟಿಫಿಕೇಟ್ ವಾಯಿದೆ ಮಾರ್ಚ್ ತಿಂಗಳಿಂದ ಜೂನ್ ವರೆಗೂ ವಿಸ್ತರಿಸಬೇಕೆಂದು ಕೋರಿದರು

ಪೂಜ್ಯ ಇಳೈ ಆಳ್ವಾರ್ ಸ್ವಾಮೀಜಿ, ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪೇಯಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿನಯ್ ಕಣಗಾಲ್, ಹೊಯ್ಸಳ ಕರ್ನಾಟಕದ ಕಾರ್ಯದರ್ಶಿ ವಿಜಯ್ ಕುಮಾರ್, ಲತಾ ಮೋಹನ್, ವಿಪ್ರ ಮಹಿಳಾಸಂಗಮ ಅಧ್ಯಕ್ಷರಾದ ಡಾ. ಲಕ್ಷ್ಮಿ, ಪುಷ್ಪಲತಾ, ಶ್ರೀಕಾಂತ್ ಕಶ್ಯಪ್, ಸಚಿಂದ್ರ, ಮಿರ್ಲೆ ಪಣೀಶ್,ನಗರ ಪಾಲಿಕೆ ಮಾಜಿ ಸದಸ್ಯ ಲೋಕೇಶ್ ಪಿಯ, ಕೆಪಿಸಿಸಿ ಸದಸ್ಯರಾದ ನಜರ್ಬಾದ್ ನಟರಾಜ್, ಸಿ ಎಸ್ ರಘು,ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಜಿ ರಾಘವೇಂದ್ರ, ರಾಕೇಶ್, ಎಸ್ ಎನ್ ರಾಜೇಶ್ ಮತ್ತಿತರರು ಹಾಜರಿದ್ದರು.


Share this with Friends

Related Post