Thu. Dec 26th, 2024

ವಿವಾಹವಾಗುವಂತೆ ಯುವಕನಿಗೆ ಮಹಿಳೆ ಬೆದರಿಕೆ

Share this with Friends

ನಂಜನಗೂಡು,ಮಾ.18: ಇದೇನ್ ಕಾಲ ಬಂತಪ್ಪಾ ಅಂತ ಹಿರಿಯರು ಮಾತನಾಡಿಕೊಳ್ಳೋ ದಿನಗಳು ಬಂದುಬಿಟ್ಟಿದೆ.

ಯಾಕಂದರೆ ಅಂತಹ ವಿಚಿತ್ರ ಪ್ರಕರಣಗಳು ಅಲ್ಲಿ ಇಲ್ಲಿ ಕೇಳಿ ಬರುತ್ತಲೇ ಇದೆ.

ವಿವಾಹಿತ ಮಹಿಳೆಯೊಬ್ಬಳು ಯುವಕನನ್ನು ವಿವಾಹವಾಗುವಂತೆ ದುಂಬಾಲುಬಿಧ್ದ ಘಟನೆ ನಂಜನಗೂಡಿನಲ್ಲಿ ನಡೆದಿದ್ದು,ಅದು ಅತಿರೇಕಕ್ಕೆ ಹೋಗಿ ಕಡೆಗೆ ಬಿಲ್ಡಿಂಗ್ ಹತ್ತಿದ ಅಸಕೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾಳೆ.

ಬಿಹಾರ ಮೂಲದ ನಾಸಿಂ ಬೇಗಂ(31) ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ. ಇದೀಗ ನಂಜನಗೂಡು ಪೊಲೀಸರ ವಶದಲ್ಲಿದ್ದಾಳೆ

ಕಳೆದ ಒಂದು ವರ್ಷದಿಂದ ಬಿಹಾರ ಮೂಲದ ಆಸಿಬೂರ್ ರೆಹಮಾನ್ ಹಾಗೂ ನಾಸಿಂ ಬೇಗಂ ಇನ್ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದಾರೆ.ಮೂರು ತಿಂಗಳ ಹಿಂದೆ ಆಸಿಬೂರ್ ರೆಹಮಾನ್ ನಂಜನಗೂಡಿನ ಹಿಮ್ಮಾವು ಗ್ರಾಮದಲ್ಲಿರುವ ಏಷಿಯನ್ ಪೈಂಟ್ಸ್ ನಲ್ಲಿ ಕಾರ್ಮಿಕನಾಗಿ ಕೆಲಸಕ್ಕೆ ಸೇರಿದ್ದಾನೆ.

ಹಿಮ್ಮಾವು ಗ್ರಾಮದಲ್ಲೇ ಕೊಠಡಿ ಬಾಡಿಗೆ ಪಡೆದು ತಂಗಿದ್ದಾನೆ.ನಿನ್ನೆ ಬಿಹಾರದಿಂದ ನೇರವಾಗಿ ನಂಜನಗೂಡಿಗೆ ಬಂದ ನಾಸಿಂ ಬೇಗಂ ಖಾಸಗಿ ಲಾಡ್ಜ್ ನಲ್ಲಿ ಕೊಠಡಿ ಪಡೆದು ಆಸಿಬೂರ್ ರೆಹಮಾನ್ ನನ್ನು ಕರೆಸಿಕೊಂಡು ಮದುವೆ ಆಗುವಂತೆ ಒತ್ತಾಯಿಸಿದ್ದಾಳೆ.

ಇಬ್ಬರಿಗೂ ವಯಸ್ಸಿನ ಅಂತರವಿದೆ ಎಂದು ಹೇಳಿ ಆಸಿಬೂರ್ ರೆಹಮಾನ್ ಮದುವೆ ನಿರಾಕರಿಸಿದ್ದಾನೆ.ಇದ್ದಕ್ಕಿದ್ದಂತೆ ಲಾಡ್ಜ್ ನ ಬಿಲ್ಡಿಂಗ್ ತಾರಸಿ ಏರಿ ಕೆಳಗೆ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದ್ದಾಳೆ.

ವಿಷಯ ತಿಳಿದು ನಂಜನಗೂಡು ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಿಳೆಯ ಮನ ಒಲಿಸಿ ವಶಕ್ಕೆ ಪಡೆದಿದ್ದಾರೆ.

ಮಹಿಳೆಗೂ ನನಗೂ ಯಾವುದೇ ಸಂಭಂಧವಿಲ್ಲವೆಂದು ಆಸಿಬೂರ್ ರೆಹಮಾನ್ ಪೊಲೀಸರಿಗೆ ತಿಳಿಸಿದ್ದು, ನಂಜನಗೂಡು ಪಟ್ಟಣ ಪೊಲೀಸರು ದೂರು ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post