Sun. Dec 29th, 2024

ಇನ್ಸ್ಟಾಗ್ರಾಂ ಸ್ನೇಹಿತನ ಭೇಟಿಯಾಗಲು ಹೋದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ

Share this with Friends

ಲಕ್ನೋ, ಜೂ.17: ಇನ್ಸ್ಟಾಗ್ರಾಂ ಸ್ನೇಹಿತನನ್ನು ಭೇಟಿಯಾಗಲು ಹೋದ ಮಹಿಳೆಗೆ ಮಾದಕ ವಸ್ತು ನೀಡಿ ಸಾಮೂಹಿಕ ಅತ್ಯಾಚಾರ ಎಸಗಿರುವ ಹೇಯ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಹೋಟೆಲ್ ವೊಂದರಲ್ಲಿ ಮತ್ತು ಬರುವ ಮಾತ್ರೆ ಬೆರೆಸಿದ ತಂಪು ಪಾನೀಯವನ್ನು ನೀಡಿ ಮಹಿಳೆ ಮೇಲೆ ಇಬ್ಬರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.

ಮೀರತ್ ನಿವಾಸಿಯಾಗಿರುವ ಸಂತ್ರಸ್ತೆ ಬ್ಯಾಂಕಿನಲ್ಲಿ ಕೆಲಸ ಮಾಡಿಸಿ ಕೊಡುವುದಾಗಿ ಹೇಳಿಕೊಂಡ ವ್ಯಕ್ತಿಯೊಂದಿಗೆ ಇನ್ಸ್ಟಾಗ್ರಾಮ್‌ನಲ್ಲಿ ಸ್ನೇಹ ಬೆಳೆಸಿದ್ದರು.

ಆತ ಆಕೆಗೆ ಬ್ಯಾಂಕಿನಲ್ಲಿ ಕೆಲಸ ಪಡೆಯಲು ಸಹಾಯ ಮಾಡಲು ಮುಂದಾದಂತೆ ನಾಟಕವಾಡಿದ್ದಾನೆ.

ಆರೋಪಿ ತನ್ನ ಸ್ನೇಹಿತನನ್ನು ಕಳುಹಿಸಿ ಕೆಲಸ ಪಕ್ಕಾ ಆಗಿದೆ ಎಂಬಂತೆ ಬಿಂಬಿಸಿ ಡೆಹ್ರಾಡೂನ್ ಗೆ ಬರುವಂತೆ ಮಹಿಳೆಯನ್ನು ನಂಬಿಸಿದ್ದ.

ಆ ವ್ಯಕ್ತಿಯ ಸ್ನೇಹಿತ ಅವಳನ್ನು ಉತ್ತರ ಪ್ರದೇಶದ ಥಾನಭವನಕ್ಕೆ ಬರುವಂತೆ ಹೇಳಿದ್ದ. ಅಲ್ಲಿ ಅವಳು ಆರೋಪಿಯನ್ನು ಭೇಟಿಯಾಗಿದ್ದಾಳೆ.

ಅಲ್ಲಿ ಆರೋಪಿಗಳು ನಿದ್ರಾಜನಕ ಬೆರೆಸಿದ ತಂಪು ಪಾನೀಯವನ್ನು ನೀಡಿದರು ಮತ್ತು ನಂತರ ಹೋಟೆಲ್ ಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ.

ಮಹಿಳೆಯ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.


Share this with Friends

Related Post