Mon. Dec 23rd, 2024

ಸಾಲದ ಶೂಲಕ್ಕೆ ಯುವಕ ಆತ್ಮಹತ್ಯೆ‌

Share this with Friends

ಬೆಳಗಾವಿ (ಕಾಗವಾಡ): ಸಾಲದ ಶೂಲಕ್ಕೆ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಉಗಾರ ಖುರ್ದ ಪಟ್ಟಣದಲ್ಲಿ ರವಿವಾರ ನಡೆದಿದೆ.‌ಶುಭಂ ಮುರಗೇಂದ್ರ ಕಳೆ(27) ಮೃತ ಪಟ್ಟ ಯುವಕನಾಗಿದ್ದಾನೆ.

ಮೃತ ಶುಭಂ ಕಳೆ ಮನೆಯವರ ವಿರೋಧ ನಡುವೆ ಸಾಲ ಮಾಡಿ ಬೈಕ ಖರೀದಿಸಿದ ಇತ್ತೀಚಿಗೆ ಬೈಕ ಸಹ ಕೈಕೊಟ್ಟಿತು,ಇದಕ್ಕೆ ತಂದೆ-ತಾಯಿ ಧೈರ್ಯ ತುಂಬಿ ಬುದ್ದಿ ಮಾತು ಹೇಳಿ ರವಿವಾರ ಊರಿಗೆ ಹೋಗಿದ್ದರು. ಇದೇ ಸಮಯದಲ್ಲಿ ಶುಭಂ ಗೆಳೆಯನಿಗೆ ಕರೆ ಮಾಡಿ ನಾನು ಇನ್ನು ಇರಲ್ಲಾ ಎಂದು ಹೇಳಿ‌ ಮನೆಯ ಬಾಗಿಲಿಗೆ ಬೀಗ ಹಾಕಿಕೊಂಡು ಮನೆಯ‌ ಬೆಡರೂಮಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ‌. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಕಾಗವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share this with Friends

Related Post