Tue. Dec 24th, 2024

ಪ್ರೀತಿಸಿದ ಯುವತಿಯ ಹತ್ಯೆ ಮಾಡಿ ಹೂತಿಟ್ಟ ಯುವಕ

Share this with Friends

ಶಿವಮೊಗ್ಗ, ಜು.24: ಯುವಕನೊಬ್ಬ ತಾನು ಪ್ರೀತಿಸಿದ ಯುವತಿಯನ್ನು ಹತ್ಯೆ ಮಾಡಿ ಹೂತುಹಾಕಿದ ಹೇಯ ಘಟನೆ‌ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನಲ್ಲಿ ನಡೆದಿದೆ.

ಹೊಸನಗರ ತಾಲೂಕಿನ ಹೆದ್ದಾರಿಪುರ ಗ್ರಾಮದಲ್ಲಿ ನಡೆದಿದ್ದು,ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಸೌಮ್ಯ ಹತ್ಯೆಯಾದ ಯುವತಿ.ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಸೃಜನ್ ಕೊಲೆ ಮಾಡಿದ ಪಾತಕಿ.

ತೀರ್ಥಹಳ್ಳಿಯಲ್ಲಿ ಫೈನಾನ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೃಜನ್ ನರ್ಸಿಂಗ್ ಓದುತ್ತಿದ್ದ ಸೌಮ್ಯಾಳನ್ನು ಪ್ರೀತಿಸಿದ್ದ.

ಇವರಿಬ್ಬರು ಸುಮಾರು ಎರಡೂವರೆ ವರ್ಷಗಳಿಂದ ಪ್ರೀತಿಸುತ್ತಿದ್ದರು,ಸೌಮ್ಯ
ಮದುವೆಯಾಗುವಂತೆ ಪೀಡಿಸುತ್ತಿದ್ದಳು.

ಯುವತಿ ಜುಲೈ 2ರಂದು ತೀರ್ಥಹಳ್ಳಿಗೆ ಹೋಗಿ ಬರುವುದಾಗಿ ಮನೆಯಲ್ಲಿ ಹೇಳಿ ತೀರ್ಥಹಳ್ಳಿಗೆ ಬಂದು ಸೃಜನ್ ನನ್ನು ಭೇಟಿಯಾಗಿ ಮದುವೆ ಬಗ್ಗೆ ಮಾತನಾಡಿದ್ದಾಳೆ.

ತನ್ನನ್ನು ಮನೆಗೆ ಕರೆದುಕೊಂಡು ಹೋಗು ನಿಮ್ಮ ಮನೆಯವರೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದ್ದಾಳೆ, ಸೃಜನ್ ಏನೇನೊ ಸಮಜಾಯಿಷಿ ಹೇಳಿದ್ದಾನೆ.

ಆಗ ಇಬ್ಬರ ಮಧ್ಯೆ ಜಗಳವಾಗಿ‌ ವಿಕೋಪಕ್ಕೆ ಹೋಗಿದೆ, ಕೋಪದ ಭರದಲ್ಲಿ ಸೃಜನ್ ಸೌಮ್ಯಳ ಕತ್ತು ಹಿಸುಕಿ ಕೊಂದಿದ್ದಾನೆ.
ನಂತರ ಸೌಮ್ಯಾಳ ದೇಹವನ್ನು ಮುಂಬಾಳು ಬಳಿ ತಂದು ಹೂತಿಟ್ಟು ಎಸ್ಕೇಪ್ ಆಗಿದ್ದಾನೆ.

ತೀರ್ಥಹಳ್ಳಿಗೆ ಹೋಗಿಬರುವುದಾಗಿ ಹೇಳಿದ್ದ ಸೌಮ್ಯ ಮನೆಗೆ ಬಾರದ ಕಾರಣ ಪೋಷಕರು ಗಾಬರಿಯಾಗಿ, ಕೊಪ್ಪ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಸಾಗರಕ್ಕೆ ತೆರಳಿ ಆರೋಪಿ ಸೃಜನ್ ನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕಿರಾತಕ ಸೌಮ್ಯಾಳನ್ನು ಕೊಂದು ಹೂತಿಟ್ಟಿರುವುದಾಗಿ ತಿಳಿಸಿದ್ದಾನೆ, ಈಗ ಸೃಜನ್ ಕಂಬಿ ಎಣಿಸುತ್ತಿದ್ದಾನೆ.


Share this with Friends

Related Post