Wed. Dec 25th, 2024

ವಿವಾಹವಾಗುವುದಾಗಿ ನಂಬಿಸಿ ಲೈಂಗಿಕ ವಾಗಿ ಬಳಸಿಕೊಂಡು ಮಹಿಳೆಗೆ ಕೈಕೊಟ್ಟ ಯುವಕ

Share this with Friends

ಮೈಸೂರು, ಜೂ.9: ವಿಚ್ಛೇದಿತ ಮಹಿಳೆ ಜತೆ ಸ್ನೇಹ ಬೆಳೆಸಿ,ವಿವಾಹವಾಗುವುದಾಗಿ ನಂಬಿಸಿ ಲೈಂಗಿಕವಾಗಿ ಬಳಸಿಕೊಂಡು ಯುವಕ‌ ಮೋಸ ಮಾಡಿರುವ ಘಟನೆ ನಡೆದಿದೆ.

ಮೈಸೂರಿನ ಬೋಗಾದಿಯ ಬ್ಯಾಂಕರ್ಸ್ ಕಾಲೋನಿಯ ಮಹಿಳೆ ಈ ಬಗ್ಗೆ ಆರೋಪ ಮಾಡಿದ್ದಾರೆ.

ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರುವ ನೊಂದ ಮಹಿಳೆ
2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಸ್ವತಂತ್ರವಾಗಿ ಬದುಕುತ್ತಿದ್ದಾರೆ.

ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ
ಎಂ.ಹರೀಶ(25) ಎಂಬ ಯುವಕ
ಮದುವೆಯಾಗುತ್ತೇನೆ ಎಂದು ವಿಚ್ಛೇದಿತ ಮಹಿಳೆಯನ್ನು ನಂಬಿಸಿ ಗರ್ಭಿಣಿ ಮಾಡಿ ನಾಪತ್ತೆಯಾಗಿದ್ದಾನೆ.

ಹರೀಶ ಮೈಸೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಾನೆ,ಮಹಿಳೆ ಮತ್ತು ಈತ
ಹವ್ಯಾಸಿ ಹಾಡುಗಾರರು,ಕಾರ್ಯಕ್ರಮಗಳಲ್ಲಿ ಹಾಡು ಹೇಳಲು ಹೋಗುತ್ತಿದ್ದಾಗ ಪರಸ್ಪರ ಪರಿಚಯವಾಗಿ ಪ್ರೇಮಕ್ಕೆ ತಿರುಗಿದೆ.

ಪ್ರೀತಿಸುತ್ತೇನೆ ನಿಮ್ಮನ್ನೇ ಮದುವೆಯಾಗುತ್ತೇನೆ ಎಂದು ಹರೀಶ ದುಂಬಾಲು ಬಿದ್ದಿದ್ದಾನೆ,ಕೊನೆಗೆ ಯುವಕನ ಒತ್ತಡಕ್ಕೆ ಮಣಿದ ಟೀಚರ್ ಒಪ್ಪಿದ್ದಾರೆ.

ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಹರೀಶ್ ಮದ್ಯ ಕುಡಿಸಿ ತನ್ನನ್ನು ಬಲವಂತವಾಗಿ ಲೈಂಗಿಕವಾಗಿ ಬಳಸಿಕೊಂಡು ಪರಾರಿಯಾಗಿದ್ದಾನೆ ತಾನೀಗ ಗರ್ಭಿಣಿ, ತನಗೆ ನ್ಯಾಯ ಬೇಕು ಎಂದು ಹರೀಶನ ಮನೆಯವರಿಗೆ ತಿಳಿಸಿದ್ದಾರೆ ಟೀಚರ್,ಆದರೆ ಮನೆಯವರು ಮದುವೆಗೆ ನಿರಾಕರಿಸಿದ್ದಾರೆ.

ನನ್ನ‌ ಮೇಲೆ ಅತ್ಯಾಚಾರ ಮಾಡಿ ಈಗ ಎರಡು ತಿಂಗಳಿಂದ ಹರೀಶ ಕಾಣೆಯಾಗಿದ್ದಾನೆ ಹಾಗಾಗಿ ಸರಸ್ವತಿ ಪುರಂ ಪೋಲಿಸ್ ಠಾಣೆಯಲ್ಲಿ ದೂರು ಕೊಟ್ಟಿದ್ದೇನೆ ಎಂದು ಟೀಚರ್ ಮಾಧ್ಯಮದವರಿಗೆ ತಿಳಿಸಿದ್ದಾರೆ.

ಪೋಲಿಸರಿಂದ ನನಗೆ ನ್ಯಾಯ ಸಿಗುವ ಭರವಸೆ ಇದೆ,ಹರೀಶ ನನ್ನನ್ನು ಮದುವೆಯಾದರೆ ಕೇಸ್ ವಾಪಸ್ ಪಡೆಯುತ್ತೇನೆ,ನನಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದಾರೆ.

ಘಟನೆ ಸಂಬಂಧ ಸರಸ್ವತಿಪುರಂ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ನಡೆಸಿ ಹರೀಶನನ್ನು ಪತ್ತೆ ಮಾಡಿ ಮಹಿಳೆಗೆ ನ್ಯಾಯ ಕೊಡಿಸಬೇಕಿದೆ.ಏನಾಗುವುದೋ ಕಾದು ನೋಡಬೇಕಿದೆ.


Share this with Friends

Related Post