ಮೈಸೂರು,ಜೂನ್.1: ಗುರಾಯಿಸಿ ನೋಡಿದ ಯುವಕನನ್ನ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮೈಸೂರಿನ ಶಾಂತಿನಗರದ ಅರ್ಬಾಜ್ ಖಾನ್(18) ಕೊಲೆಯಾದ ಯುವಕ.
ಶಾದಿಲ್,ಶಹಬಾಜ್,ಶೋಯಬ್ ಹಾಗೂ ಸಾಹಿಲ್ ಎಂಬವರು ಅರ್ಬಾಜ್ ಖಾನ್ ನನ್ನು ಕೊಲೆ ಮಾಡಿದ್ದಾರೆ.
ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್ ಕೂಡಾ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ.
ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿ ನೋಡಿದನೆಂದು ಆರೋಪಿಗಳು ಕಿರಿಕ್ ಮಾಡಿದ್ದಾರೆ.
ಜಗಳ ಜೋರಾಗಿ ಮಾರಕಾಸ್ತ್ರಗಳಿಂದ ಹೊಡೆದಾಡಿದ್ದಾರೆ ಆಗ ಅರ್ಬಾಜ್ ಖಾನ್ ತೀವ್ರ ಗಾಯಗೊಂಡು ಮೃತಪಟ್ಟಿದ್ದಾನೆ.
ಈ ಸಂಬಂಧ ಉದಯಗಿರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.