Tue. Apr 15th, 2025

ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿದ ಯುವತಿ!

Share this with Friends

ಮಂಗಳೂರು,ಫೆ.15: ಚಲಿಸುತ್ತಿದ್ದ ರೈಲಿನಿಂದ ಯುವತಿ ನೇತ್ರಾವತಿ ನದಿಗೆ ಹಾರಿ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ನಡೆದಿದೆ.

ಬಂಟ್ವಾಳದ ನೇತ್ರಾವತಿ ನದಿಯ ರೈಲ್ವೇ ಮೇಲ್ಸೇತುವೆ ಗೆ ರೈಲು ತಲುಪಿದ ಕೂಡಲೆ ಯುವತಿ ದಿಡೀರನೆ ರೈಲಿನಿಂದ ನದಿಗೆ ಹಾರಿದ್ದಾಳೆ. ಅದೇ ಬೋಗಿಯಲ್ಲಿದ್ದ ಇತರೆ ಪ್ರಯಾಣಿಕರು ಇದನ್ನು ಕಂಡು ಅವಾಕ್ಕಾಗಿ ಕೂಗಿಕೊಂಡಿದ್ದಾರೆ.

ತುಮಕೂರು ತಾಲೂಕು, ಮಿಡಿಗೇಶಿ ಪಡಸಾಕೆಹಟ್ಟಿ ನಿವಾಸಿ
ಎಂ.ಜಿ. ನಯನಾ(27) ಮೃತ ಯುವತಿ.

ಯುವತಿ ತನ್ನ ಬಳಿಯಿದ್ದ ಬ್ಯಾಗ್ ಅನ್ನ ತಾನಿದ್ದ ಬೋಗಿಯಲ್ಲೇ ಬಿಟ್ಟು ಚಲಿಸುತ್ತಿದ್ದ ರೈಲಿನಿಂದ ನದಿಗೆ ಹಾರಿದ್ದಾಳೆ.

ರೈಲು ಬ್ರಿಡ್ಜ್‌ ಬಳಿ‌ ಬರುವುದನ್ನೇ ಕಾದಿದ್ದು ನದಿಗೆ ಹರಿರುವುದು ನೋಡಿದರೆ ಮೊದಲೇ ಈ‌ ಬಗ್ಗೆ ‌ನಿರ್ಧರಿಸಿರುತ್ತಾಳೆ.

ಮೃತದೇಹವನ್ನು ಬಂಟ್ವಾಳ ತಾಲೂಕು ಆಸ್ಪತ್ರೆಯಲ್ಲಿ ಮಹಜರು ಮಾಡಿ ವಾರಸುದಾರರಿಗೆ ಒಪ್ಪಿಸಲಾಗಿದೆ.

ಬಂಟ್ವಾಳ ಪಟ್ಟಣ ಠಾಣೆ‌‌‌ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.


Share this with Friends

Related Post