ಬೆಂಗಳೂರು: ಸಂಸತ್ತಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ರವರ ಬಗ್ಗೆ ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆಂದು ಆರೋಪಿಸಿ ಆಮ್ ಆದ್ಮಿ ಪಕ್ಷ ಪ್ರತಿಭಟನೆ ನಡೆಸಿತು.
ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಅಮಿತ್ ಶಾ ಗೃಹ ಸಚಿವ ಸ್ಥಾನದಲ್ಲಿ ಮುಂದುವರಿಯಲು ಅನರ್ಹರು ಎಂದು ವಾಗ್ದಾಳಿ ನಡೆಸಿದರು.
ದೇಶದ ಎಲ್ಲರಿಗೂ ಅಂಬೇಡ್ಕರ್ ಅವರು ದೈವ ಸಮಾನರು ದೈವಕ್ಕೆ ಅಪಮಾನಕಾರಿಯಾಗುವ ಹೇಳಿಕೆಗಳನ್ನು ಯಾರೆ ನೀಡಿದರು ಪಕ್ಷವು ಸಹಿಸುವುದಿಲ್ಲ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯ ಶರ್ಮ, ರುದ್ರಯ್ಯ ನವಲಿ ಹಿರೇಮಠ, ಪ್ರೊ. ಮಹದೇವಸ್ವಾಮಿ, ಅಶೋಕ್, ಮೃತ್ಯುಂಜಯ ,ಉಷಾ ಮೋಹನ್, ವೀಣಾ,ಶಶಿಧರ್ ಆರಾಧ್ಯ , ಶ್ರೀಧರ,ಸಿದ್ದು,ಸರವಣ,ಮುನೇಂದ್ರ ,ಮುನೇಶ್ , ಮಹಾಲಕ್ಷ್ಮಿ, ಅಂಜನಾ ಗೌಡ, ಮಾರಿಯಾ, ಪುಷ್ಪ,ಇರ್ಷಾದ್, ಮಣಿಕಂಠ ಸೇರಿದಂತೆ ಹಲವು ಮುಖಂಡರುಗಳು ಭಾಗವಹಿಸಿದ್ದರು.