Sat. Apr 12th, 2025

ಒಕ್ಕಲಿಗರ ಸಂಘದಿಂದ ಚಾಮುಂಡೇಶ್ವರಿ ದೇವಿಗೆ ಅಭಿಷೇಕ,ಪೂಜೆ

Share this with Friends

ಮೈಸೂರು, ಜು.27: ಅಖಿಲ ಕರ್ನಾಟಕ ಒಕ್ಕಲಿಗರ ಸಂಘದ ವತಿಯಿಂದ ನಾಡ ದೇವತೆ ತಾಯಿ ಚಾಮುಂಡೇಶ್ವರಿ ದೇವಿಯ ವರ್ಧಂತಿ ಅಂಗವಾಗಿ ಚಾಮುಂಡೇಶ್ವರಿಗೆ ಅಭಿಷೇಕ, ಪೂಜೆಗಳನ್ನು ಹಮ್ಮಿಕೊಳ್ಳಲಾಯಿತು.

ಸಂಘದ ರಾಜ್ಯಾಧ್ಯಕ್ಷ ಸಿ.ಜಿ ಗಂಗಾಧರ್ ನೇತೃತ್ವದಲ್ಲಿ ಮೈಸೂರಿನ ಚಾಮರಾಜ ಜೋಡಿ ರಸ್ತೆಯಲ್ಲಿ, ತಾಯಿ ಚಾಮುಂಡೇಶ್ವರಿಗೆ ಅಭಿಷೇಕ, ಪೂಜೆಗಳನ್ನು ನೆರವೇರಿಸಿ ಸುಮಾರು 2 ಸಾವಿರ ಜನರಿಗೆ ಅನ್ನದಾಸೋಹ ಮಾಡಲಾಯಿತು.

ಅನ್ನ ದಾಸೋಹ ಕಾರ್ಯಕ್ರಮದಲ್ಲಿ ಸಂಘದ ಜಿಲ್ಲಾಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಲತಾ ರಂಗನಾಥ್, ಶಿವಲಿಂಗಯ್ಯ, ಗೋವಿಂದೇಗೌಡ, ವರಕೂಡು ಕೃಷ್ಣೇಗೌಡ , ನರಸಿಂಹೇಗೌಡ, ಮಂಜುಳಾ , ಚಂದ್ರಶೇಖರ್, ಆಟೋ ಮಹದೇವ್ ರಾಮಕೃಷ್ಣೇಗೌಡ ಮತ್ತಿತರರು ಹಾಜರಿದ್ದರು.


Share this with Friends

Related Post